ADVERTISEMENT

ಚಿಕ್ಕಬಳ್ಳಾಪುರ: ಆದಿಯೋಗಿ ಪ್ರತಿಮೆಗೆ ನಾಡಧ್ವಜದ ರಂಗು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 6:00 IST
Last Updated 2 ನವೆಂಬರ್ 2025, 6:00 IST
<div class="paragraphs"><p>ಚಿಕ್ಕಬಳ್ಳಾಪುರ ಈಶಾ ಯೋಗ ಕೇಂದ್ರದ ಆದಿ ಯೋಗಿ ಪ್ರತಿಮೆ ಮೇಲೆ ನಾಡಧ್ವಜದ ಬಣ್ಣಗಳು</p></div>

ಚಿಕ್ಕಬಳ್ಳಾಪುರ ಈಶಾ ಯೋಗ ಕೇಂದ್ರದ ಆದಿ ಯೋಗಿ ಪ್ರತಿಮೆ ಮೇಲೆ ನಾಡಧ್ವಜದ ಬಣ್ಣಗಳು

   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿಯ ಈಶಾ ಯೋಗ ಕೇಂದ್ರದಲ್ಲಿ ನಡೆದ 70ನೇ ರಾಜ್ಯೋತ್ಸವ ಕಾರ್ಯಕ್ರಮ ವೇಳೆ ಆದಿಯೋಗಿಯ ಪ್ರತಿಮೆ ಮೇಲೆ ನಾಡಧ್ವಜದ ಬಣ್ಣಗಳನ್ನು ಬೆಳಗಿಸಲಾಯಿತು. 

ಈ ವೇಳೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಸಂಭ್ರಮಿಸಿದರು. ಇದೇ ಮೊದಲ ಬಾರಿಗೆ ನಾಡಧ್ವಜದ ಬಣ್ಣಗಳಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಮೇಲೆ ಬೆಳಗಿಸಲಾಯಿತು.

ADVERTISEMENT

ಶನಿವಾರ ಸಂಜೆ 6.30ಕ್ಕೆ ಕೇಂದ್ರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮಗಳು ಆರಂಭವಾದವು. ಯೋಗ ಕೇಂದ್ರದಲ್ಲಿ ಧ್ವಜಾರೋಹಣವನ್ನೂ
ಮಾಡಲಾಯಿತು. 

ಪೊಲೀಸ್ ಮಹಾನಿರ್ದೇಶಕ ಭೇಟಿ: ಈಶಾ ಯೋಗ ಕೇಂದ್ರಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಯೋಗ ಕೇಂದ್ರದ ಆದಿಯೋಗಿ ಪ್ರತಿಮೆ, ನಾಗಮಂಟಪ ಮತ್ತಿತರ ಸ್ಥಳಗಳಿಗೆ ಅವರು ಭೇಟಿ ನೀಡಿದರು. 

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.