ADVERTISEMENT

ಬಾಗೇಪಲ್ಲಿ | ಆರ್ಥಿಕ ಬಲ ನೀಡಿದ ಮಿಶ್ರ ಬೇಸಾಯ

ಟೊಮೆಟೊ ಮಾರಾಟಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 7:44 IST
Last Updated 14 ಜುಲೈ 2024, 7:44 IST
ಬಾಗೇಪಲ್ಲಿ ತಾಲ್ಲೂಕಿನ ಜೂಲಪಾಳ್ಯ ಗ್ರಾಮದ ರೈತ ಆರ್.ಕೃಷ್ಣಮೂರ್ತಿ ತರಕಾರಿ ಬೆಳೆದಿರುವುದು
ಬಾಗೇಪಲ್ಲಿ ತಾಲ್ಲೂಕಿನ ಜೂಲಪಾಳ್ಯ ಗ್ರಾಮದ ರೈತ ಆರ್.ಕೃಷ್ಣಮೂರ್ತಿ ತರಕಾರಿ ಬೆಳೆದಿರುವುದು   

ಬಾಗೇಪಲ್ಲಿ: ತಾಲ್ಲೂಕಿನ ಜೂಲಪಾಳ್ಯ ಗ್ರಾಮದ ಮೂಲತಃ ಕೃಷಿಕ ಕುಟುಂಬದವರಾದ ರೈತ ಆರ್.ಕೃಷ್ಣಮೂರ್ತಿ ಮಿಶ್ರ ಬೆಳೆ ಬೆಳೆದ ಆರ್ಥಿಕ ಲಾಭ ಗಳಿಸುತ್ತಿದ್ದಾರೆ.

ಕೃಷಿ ಕಾಯಕವು ನಂಬಿದವರನ್ನು ಕೈ ಬಿಟ್ಟಿಲ್ಲ ಎಂಬಂತೆ ಅನೇಕ ತಲೆಮಾರುಗಳಿಂದ ಕೃಷ್ಣಮೂರ್ತಿ ಸಹೋದರರು 10 ಎಕರೆ ಹಾಗೂ ಸಂಬಂಧಿಕರ ಹೊಲಗದ್ದೆಯಲ್ಲಿ ಟೊಮೆಟೊ 5 ಎಕರೆ, ಸೌತೆಕಾಯಿ ಎರೂಡವರೆ ಹಾಗೂ ಈರುಳ್ಳಿ ಎರಡೂವರೆ ಎಕರೆಯಲ್ಲಿ ಹಾಗೂ 2 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದಾರೆ.

ಹುಣಸೆ ಗಿಡ 200, ಸೀತಾಫಲ 250 ಗಿಡ, ತೆಂಗಿನ ಮರ 10 ಇದೆ. ಹೈನುಗಾರಿಕೆಗೆ 2 ಸೀಮೆಹಸು ಸಾಕಿದ್ದಾರೆ. 10 ಮಂದಿಗೆ ಕೂಲಿಕೆಲಸ ನೀಡುತ್ತಿದ್ದಾರೆ. ಇದೀಗ ಹಿಪ್ಪುನೇರಳೆ ಬೆಳೆಯಲು ಉತ್ಸುಕರಾಗಿದ್ದಾರೆ. ಕೋಳಿ, ಕುರಿ ಸಾಕಾಣಿಕೆ ಮಾಡಲು ಚಿಂತನೆ ನಡೆಸಿದ್ದಾರೆ.

ADVERTISEMENT

ಇದೀಗ ಟೊಮೆಟೊ ಬೆಳೆ ಉತ್ತಮ ಇಳುವರಿ ಕಂಡಿದೆ. ಸದ್ಯ ಟೊಮೆಟೊ ಬೆಳೆಯ ದರ ಸಾಮಾನ್ಯ ಸ್ಥಿತಿಯಲ್ಲಿದೆ. ಸೀತಾಫಲ, ಈರುಳ್ಳಿ, ಸೌತೆಕಾಯಿ ಮಾರುಕಟ್ಟೆಯಲ್ಲಿ ಇದೀಗ ಕಡಿಮೆ ಬೆಲೆಯಲ್ಲಿ ಮಾರಾಟ ಆಗುತ್ತಿದೆ ಎನ್ನುತ್ತಾರೆ ರೈತ ಕೃಷ್ಣಮೂರ್ತಿ.

‘2 ಕೊಳವೆಬಾವಿ ಮೂಲಕ ತುಂತುರು, ಹನಿ ನೀರಾವರಿ ಪದ್ಧತಿಯನ್ನು ಕೃಷಿ ಬೆಳೆಗೆ ಅಳವಡಿಸಿಕೊಂಡಿದ್ದೇನೆ. ಉತ್ತಮ ಇಳುವರಿಗೆ ಸಾವಯವ ಗೊಬ್ಬರ ಹಾಕಿದ್ದೇವೆ. ರಾಸಾಯನಿಕ ಮಿಶ್ರಣದ ರಸಗೊಬ್ಬರಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಿದ್ದೇವೆ. ಟೊಮೆಟೊ ಬೆಳೆ ಇದಿಗ ಫಸಲಿಗೆ ಬಂದಿದೆ. ಟೊಮೆಟೊ ಮಾರಾಟಕ್ಕೆ ಸಿದ್ಧತೆ ಮಾಡಲಾಗಿದೆ. ಇದುವರೆಗೂ ನಿರೀಕ್ಷೆಯಂತೆ ಬೆಳೆಗಳಿಂದ ಆರ್ಥಿಕ ಲಾಭ ಪಡೆದಿದ್ದೇನೆ’ ಎಂದು ರೈತ ಕೃಷ್ಣಮೂರ್ತಿ ತಿಳಿಸಿದರು.

‘ಕೃಷಿಕರು ವೈಜ್ಞಾನಿಕ, ಯಾಂತ್ರೀಕೃತ ಬೇಸಾಯ ಪದ್ಧತಿ, ಉತ್ತಮ ಇಳುವರಿ ಬರಲು ಜೈವಿಕ ರಸಗೊಬ್ಬರ ಬಳಕೆ ಮಾಡಬೇಕು. ಹನಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ, ತರಕಾರಿ ಬೆಳೆಗಳ ಜೊತೆಗೆ ಹೈನುಗಾರಿಕೆ, ರೇಷ್ಮೆ, ಪ್ರಾಣಿ ಸಾಕಾಣಿಕೆ, ಗಿಡ ಮರಗಳನ್ನು ಇಟ್ಟು ಪೋಷಣೆ ಮಾಡಿದರೆ ಲಾಭ ಗಳಿಸಬಹುದು’ ಎಂದು ರೈತ ಕೃಷ್ಣಮೂರ್ತಿ ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.