ADVERTISEMENT

ಚಿಂತಾಮಣಿ: ಯೂರಿಯಾ ಅಕ್ರಮ ಮಾರಾಟ ದೂರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:51 IST
Last Updated 7 ಫೆಬ್ರುವರಿ 2026, 5:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿಂತಾಮಣಿ: ನಗರದ ಚೇಳೂರು ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ರೈತರಿಗೆ ಯೂರಿಯಾ ಗೊಬ್ಬರ ವಿತರಿಸಲಾಗುತ್ತಿಲ್ಲ. ಸಲ್ಫರ್ ಗೊಬ್ಬರ ಖರೀದಿಸಿದರೆ ಮಾತ್ರವೇ ಯೂರಿಯಾ ನೀಡುವುದಾಗಿ ಅಂಗಡಿಯವರು ಹೇಳುತ್ತಿದ್ದಾರೆ ಎಂದು ತಾಲ್ಲೂಕಿನ ಕದಿರಪ್ಪನಾಯನಕೋಟೆ ಗ್ರಾಮದ ನಿವಾಸಿ ಬಿ. ಸುಧಾಕರರೆಡ್ಡಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದಾರೆ. 

ಕಲ್ಪವೃಕ್ಷ ಫರ್ಟಿಲೈಸರ್ ಅಂಗಡಿಯವರು ರೈತರು ಯೂರಿಯಾ ಗೊಬ್ಬರದ ಮೂಟೆಯನ್ನು ಕೇಳಿದರೆ ಸಲ್ಫರ್ ಗೊಬ್ಬರವನ್ನು ತೆಗೆದುಕೊಂಡರೆ ಮಾತ್ರ ಯೂರಿಯಾ ನೀಡುವುದಾಗಿ ಒತ್ತಡ ಹೇರುತ್ತಿದ್ದಾರೆ ಎಂದು ತಾಲ್ಲೂಕಿನ ಕದಿರಪ್ಪನಾಯನಕೋಟೆ ಗ್ರಾಮದ ನಿವಾಸಿ ಬಿ.ಸುಧಾಕರರೆಡ್ಡಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ADVERTISEMENT

ರೈತರಿಗೆ ಬೇಕಿರುವ ಗೊಬ್ಬರ ನೀಡದೆ ಅಂಗಡಿಯವರು ಮಾರಾಟ ಮಾಡುವ ಗೊಬ್ಬರ ಖರೀದಿಸುವಂತೆ ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ. ಜೊತೆಗೆ ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ದೂರವಾಣಿ ಮೂಲಕ ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದೇನೆ. ಆದಾಗ್ಯೂ, ಅಂಗಡಿಯವರು ಯೂರಿಯಾ ಮಾತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.