ADVERTISEMENT

ಚಿಂತಾಮಣಿ | ನಗರಸಭೆಗೆ ತೆರಿಗೆ ಪಾವತಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:21 IST
Last Updated 18 ಅಕ್ಟೋಬರ್ 2025, 6:21 IST
ಚಿಂತಾಮಣಿ ನಗರಸಭೆಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೌರಾಯುಕ್ತ ಜಿ.ಎನ್‌.ಚಲಪತಿ ಮಾತನಾಡಿದರು
ಚಿಂತಾಮಣಿ ನಗರಸಭೆಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೌರಾಯುಕ್ತ ಜಿ.ಎನ್‌.ಚಲಪತಿ ಮಾತನಾಡಿದರು   

ಚಿಂತಾಮಣಿ: ನಗರಸಭೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಕೂಡಲೇ ಬಾಕಿ ಪಾವತಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವರ ಹೆಸರನ್ನು ಬಹಿರಂಗಗೊಳಿಸಲಾಗುವುದು ಎಂದು ನಗರಸಭೆ ಆಯುಕ್ತ ಜಿ.ಎನ್.ಚಲಪತಿ ತಿಳಿಸಿದರು.

ನಗರಸಭೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಗೆ ಹೆಚ್ಚಿನ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಸಂಸ್ಥೆಗಳು, ಅಂಗಡಿ ಮಳಿಗೆಗಳ ಹೆಸರುಗಳನ್ನು ಬಹಿರಂಗಪಡಿಸಿ ಮಾತನಾಡಿದರು.

ನಗರಸಭೆ ಅಂಗಡಿ-ಮುಂಗಟ್ಟುಗಳಿಗೆ ಅನೇಕ ಬಾರಿ ನೋಟಿಸ್ ನೀಡಲಾಗಿದೆ. 2 ತಿಂಗಳಿನಿಂದ ಕರಪತ್ರಗಳ ಮೂಲಕ ಮನವಿ ಮಾಡಲಾಗಿದೆ. ಬಾಕಿ ಇರುವವರಿಗೆ ಕಾಲಾವಕಾಶ ನೀಡಬೇಕು, ಏಕಾಏಕಿ ಬೀಗ ಹಾಕಬಾರದು ಎಂದು ಸಚಿವರು ಸೂಚಿಸಿದ್ದರು. ಎರಡು ತಿಂಗಳು ಕಾಲಾವಕಾಶ ನೀಡಿದ್ದರೂ ಬಾಕಿ ಕಟ್ಟಿಲ್ಲ. ಇನ್ನೂ 15 ದಿನ ಕಾಲಾವಕಾಶ ನೀಡಲಾಗುವುದು. ಪಾವತಿಸದಿದ್ದರೆ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ಕೆಲವು ಕಟ್ಟಡಗಳ ಮಾಲೀಕರು ಕಡಿಮೆ ತೆರಿಗೆ ಕಟ್ಟುತ್ತಿದ್ದಾರೆ. ಹೆಚ್ಚು ಬಾಕಿ ಉಳಿಸಿಕೊಂಡಿರುವ 45 ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ. ಅವರಿಂದ ಸುಮಾರು ₹9.35 ಕೋಟಿ ತೆರಿಗೆ ಬಾಕಿ ಬರಬೇಕಾಗಿದೆ ಎಂದರು.

ಕಿಸಾನ್ ಪ್ಯಾಕ್ಟರಿ ₹70.85 ಲಕ್ಷ, ಆದರ್ಶ ಚಿತ್ರಮಂದಿರ ₹32ಲಕ್ಷ, ಕೆಎಂಡಿ ಕಲ್ಯಾಣ ಮಂಟಪ ₹37.49 ಲಕ್ಷ, ರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್ ₹29.59 ಲಕ್ಷ, ಕೋಮಾರ್ಲು ಎಂಟರ್ ಪ್ರೈಸರ್ಸ್ ₹7.85 ಲಕ್ಷ, ಕನ್ಯಕಾ ಪರಮೇಶ್ವರಿ ಸೇವಾ ಟ್ರಸ್ಟ್ ₹39 ಲಕ್ಷ, ಚೆನ್ನಕೇಶವ ಲಾಡ್ಜ್ ₹16.95, ಕೆನರಾ ಬ್ಯಾಂಕ್ ಬಿಲ್ಡಿಂಗ್ ₹6.88, ಕೆ.ಎನ್.ನಾಗೇಂದ್ರ ₹72.17ಲಕ್ಷ, ಅಶ್ವತ್ಥರೆಡ್ಡಿ ₹15 ಲಕ್ಷ, ಎಂ.ಕೆ.ಬಿ ಶಾಲೆ ₹3.10 ಲಕ್ಷ, ವೆಂಕಟೇಶ್ವರ ಎಂಟರ್ ಪ್ರೈಸರ್ಸ್ ₹1.30 ಲಕ್ಷ, ಚೆಮ್ಮನೂರ್ ಜ್ಯೂಲರ್ಸ್ ₹4.70 ಲಕ್ಷ, ಚೆಮ್ಮನೂರ್ ಜ್ಯೂವೆಲರ್ಸ್ ₹2.90, ಭಾರತ್ ಪೆಟ್ರೋಲಿಯಂ ₹1.58ಲಕ್ಷ, ಪ್ಯಾರೈಡರ್ಸ್ ಮಿಲ್ ₹79ಲಕ್ಷ, ಪಿವಿಎನ್ ಸಿಲ್ಕ್ಸ್ ₹1,94 ಲಕ್ಷ, ಎಸ್.ಎಲ್.ಎನ್ ಚಿತ್ರಮಂದಿರ ₹20ಲಕ್ಷ, ವುಡ್ ಲ್ಯಾಂಡ್ ₹26.86ಲಕ್ಷ, ಬಾಲಾಜಿ ಲಾಡ್ಜ್ ₹20 ಲಕ್ಷ, ಎಸ್.ಎಫ್‌.ಎಸ್ ಶಾಲೆ ಶ್ರೀರಾಮ ಸೇವಾ ಟ್ರಸ್ ₹5.31, ಎನ್.ತಿಮ್ಮಾರೆಡ್ಡಿ ₹6.65ಲಕ್ಷ, ಅನುರಾಗ ಬಾರ್ ₹1.85ಲಕ್ಷ, ವೇಗಾ ಮಿಲ್ಸ್ ₹11.70ಲಕ್ಷ, ಅಜಾದ್ ಕಲ್ಯಾಣ ಮಂಟಪ ₹9.95ಲಕ್ಷ, ವಿಜಯಲಕ್ಷ್ಮಿ ₹4.83ಲಕ್ಷ, ಫಾಸ್ಟ್ ಪುಡ್ ರಾಘವೇಂದ್ರ ₹1.83ಲಕ್ಷ, ಎಂ.ಜಿ.ಸಂಜಯ ಕುಮಾರ್ ₹2.26ಲಕ್ಷ, ಮಮತಾ ಅಂಡ್ ಸಂಜಯ ಕುಮಾರ್ ₹5 ಲಕ್ಷ ಬಾಕಿ ಇದೆ ಎಂದು ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ್, ಉಪಾಧ್ಯಕ್ಷೆ ಕೆ.ರಾಣಿಯಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.