ADVERTISEMENT

ಪೆರೇಸಂದ್ರದಲ್ಲಿ ಕೋವಿಡ್ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 6:29 IST
Last Updated 8 ಅಕ್ಟೋಬರ್ 2021, 6:29 IST
ಪೆರೇಸಂದ್ರದಲ್ಲಿ ನಡೆದ ಕೋವಿಡ್ ಅರಿವು ಕಾರ್ಯಕ್ರಮದಲ್ಲಿ ಪಿ.ಎನ್. ಚನ್ನಕೃಷ್ಣ ರೆಡ್ಡಿ, ವಕೀಲ ಪ್ರಕಾಶ್, ಭಾರತ ಸಮಕ್ಯ ಕಾರ್ಮಿಕ ಸಂಘದ ರಾಷ್ಟ್ರೀಯ ಅಧ್ಯಕ್ಷ ಜೆನ್ನಿ ಜಯರಾಮ್, ಜೆವೈ ಎಲೆಕ್ಟ್ರಿಕಲ್ ವ್ಯವಸ್ಥಾಪಕ ಎಂ.ಡಿ. ಲಕ್ಷ್ಮಣ ರೆಡ್ಡಿ, ಡಿ. ಬಾಬು, ಶ್ರೀನಿವಾಸ್, ಪುರುಷೋತ್ತಮ ಇದ್ದರು

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪೆರೇಸಂದ್ರದಲ್ಲಿ ಗುರುವಾರ ಪ್ರಗತಿ ಟ್ರೇಡರ್ಸ್, ಜೆವೈ ಎಲೆಕ್ಟ್ರಿಕಲ್ಸ್ ಮತ್ತಿತರ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಕೋವಿಡ್ ಅರಿವು ಕಾರ್ಯಕ್ರಮ ನಡೆಯಿತು.

ಆರೋಗ್ಯ ಸೇತು ಆ್ಯಪ್ ಬಗ್ಗೆ ಅರಿವು ಮೂಡಿಸಲಾಯಿತು. ಮುಖಂಡರಾದ ಪಿ.ಎನ್. ಚನ್ನಕೃಷ್ಣ ರೆಡ್ಡಿ, ವಕೀಲ ಪ್ರಕಾಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಮನೆ ಬಾಗಿಲಿಗೆ ಉಚಿತ ನೈರ್ಮಲ್ಯ ಯೋಜನೆ’ಯಡಿಯಲ್ಲಿ ಪ್ರತಿ ಮನೆ ಬಾಗಿಲಿಗೆ ಉಚಿತವಾಗಿ ಸ್ಯಾನಿಟೈಸರ್ ನೀಡಲಾಯಿತು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ಗ್ರಾಮದಲ್ಲಿ ಮನೆಗಳ ಬಳಿ ಸೋಂಕು ನಿವಾರಕ ಸಿಂಪಡಿಸಲಾಯಿತು.

ADVERTISEMENT

ಕೋವಿಡ್ ಸೋಂಕು ರಾಜ್ಯದಲ್ಲಿ ಕಡಿಮೆ ಆಗುತ್ತಿದೆ. ಸೋಂಕು ಮತ್ತೆ ಹೆಚ್ಚಬಾರದು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಗಣ್ಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.