ADVERTISEMENT

ಚಿಕ್ಕಬಳ್ಳಾಪುರ: ₹2.82 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 6:44 IST
Last Updated 4 ನವೆಂಬರ್ 2022, 6:44 IST

ಚಿಕ್ಕಬಳ್ಳಾಪುರ: ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಂ) ಮಾಡಬಹುದು, ಆದಾಯ ಗಳಿಸಬಹುದು ಎಂದು ನಂಬಿಸಿ ನಗರದ ಕಿಡ್ಸ್ ಶಾಲೆ ಮುಖ್ಯಶಿಕ್ಷಕಿ ಹೇಮಶ್ರೀ ಅವರಿಗೆ ಆನ್‌ಲೈನ್ ವಂಚಕರು ₹ 2.82 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಅವರು ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಬಿಡುವಿನ ವೇಳೆಯಲ್ಲಿ ಮನೆಯಿಂದ ಕೆಲಸ ಮಾಡಿಕೊಂಡು ಹಣ ಸಂಪಾದನೆ ಮಾಡೋಣ ಎಂದು ಆನ್‌ಲೈನ್ ವರ್ಕ್ ಫ್ರಮ್ ಹೋಂ ಕೆಲಸ ಹುಡುಕುತ್ತಿದ್ದೆ. ಆಗ ಇನ್‌ಸ್ಟಾಗ್ರಾಂನಲ್ಲಿ ಅಮೆಜಾನ್ ವರ್ಕ್ ಫ್ರಮ್ ಹೋಂಎಂಬ ಲಿಂಕ್ ಬಂದಿತು. ಅದನ್ನು ಕ್ಲಿಕ್ ಮಾಡಿದೆ. ನೋಂದಣಿಯೂ ಆದೆ. ನಂತರ ಅವರು ಟಾಸ್ಕ್‌ಗಳನ್ನು ನೀಡಿದರು.

ನಾನು ಒಮ್ಮೆ 1 ಲಕ್ಷ, ಎರಡು ಬಾರಿ ತಲಾ ₹ 50 ಸಾವಿರ ಮತ್ತೊಮ್ಮೆ ₹ 80 ಸಾವಿರ ಹೂಡಿಕೆ ಮಾಡಿದೆ. ಈಗಲೂ ಅವರು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಒಟ್ಟು ₹2,82,410 ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ. ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಆನ್‌ಲೈನ್ ಮೂಲಕ ವಂಚಿಸಿರುವವರನ್ನುಪತ್ತೆ ಮಾಡಿ ನನ್ನ ಹಣ ವಾಪಸ್ ಕೊಡಿಸಿ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT