ADVERTISEMENT

ಮೈದುನನ ಕೊಲೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 4:45 IST
Last Updated 10 ಜನವರಿ 2021, 4:45 IST
1
1   

ಗೌರಿಬಿದನೂರು: ಅಕ್ಕನ ಸಂಸಾರ ಚೆನ್ನಾಗಿರಲಿ ಎಂದು ಭಾವನ ಅನೈತಿಕ ಸಂಬಂಧ ಪ್ರಶ್ನಿಸಿ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದ ಮೈದುನನ್ನೇ ಭಾವ ಭೀಕರವಾಗಿ ಹತ್ಯೆ ಮಾಡಿಸಿ ಸೇಡು ತೀರಿಸಿಕೊಂಡಿದ್ದ ಘಟನೆ ಇತ್ತೀಚೆಗೆ ನಗರದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ‌ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾದಿಕ್ ಪಾಷಾ, ಟಿಪ್ಪು, ಸಮಿ ಉಲ್ಲಾ ಮತ್ತು ಸಯ್ಯದ್ ಬಂಧಿತರು.

ನಗರದ ಟಿಪ್ಪು ನಗರದ ಯುವಕ ಇಮ್ರಾನ್ ಖಾನ್ (25) ಎಂಬಾತನನ್ನು ಜ. 3ರಂದು ಹತ್ಯೆ ಮಾಡಿ ನಗರದ ಸಮೀಪದಲ್ಲಿರುವ ಬೈಪಾಸ್ ರಸ್ತೆ ಬಳಿ ಮೃತದೇಹವನ್ನು ಎಸೆಯಲಾಗಿತ್ತು.

ADVERTISEMENT

ಭಾವ ಸಾದಿಕ್ ಪಾಷಾ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅರಿತಿದ್ದ ಇಮ್ರಾನ್ ಖಾನ್ ಭಾವನ ವರ್ತನೆಯನ್ನು ನೋಡಿ ಸಾರ್ವಜನಿಕವಾಗಿ ಹಲ್ಲೆ ಮಾಡಿ ಅವಮಾನಿಸಿದ್ದ. ಇದರಿಂದ ಸಾದಿಕ್ ಪಾಷಾ‌ ತನ್ನ ಮೈದುನನಾದ ಇಮ್ರಾನ್ ಖಾನ್‌ನನ್ನು ಮುಗಿಸಲು ತನ್ನ ಸ್ನೇಹಿತರೊಂದಿಗೆ ಸೇರಿ ಯೋಜನೆ ರೂಪಿಸಿದ್ದ.

ಆರೋಪಿಗಳು ಜ. 3ರಂದು ಇಮ್ರಾನ್ ‌ಖಾನ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ನೆರೆಯ ಆಂಧ್ರಪ್ರದೇಶದ ಹಿಂದೂಪುರದ ನಿವಾಸಿ ಚಾಂದ್ ಪಾಷಾ ಮೈದುನನನ್ನು ಹತ್ಯೆ ಮಾಡಲು ಹಿಂದೂಪುರದ ಲಾರಿ ಚಾಲಕರ ಸಹಕಾರ ಪಡೆದಿದ್ದ.

ಆರೋಪಿಗಳು ಟವರ್ ಲೋಕೇಷನ್ ಸಿಗುತ್ತೆ ಎಂದು
ಮೊಬೈಲ್ ತರದೇ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚಾಂದ್ ಪಾಷಾನ ಎರಡನೇ ಹೆಂಡತಿ‌ ಮುಮ್ತಾಜ್ ಹೇಳಿಕೆಯಿಂದ ಆರೋಪಿಗಳ ಬಗ್ಗೆ ಸುಳಿವು ದೊರೆತಿದೆ. ಇಮ್ರಾನ್ ಖಾನ್ ಹತ್ಯೆಗೂ ಮುನ್ನ ಸಂಬಂಧ ಚೆನ್ನಾಗಿರುವಂತೆ ₹ 10 ಸಾವಿರ ನೀಡಿದ್ದ. ತಾನು ಗೌರಿಬಿದನೂರಿಗೆ ಬಂದೇ ಇಲ್ಲ ಎಂದು ಪೊಲೀಸರನ್ನು ದಿಕ್ಕು ತಪ್ಪಿಸಿದ್ದ ಚಾಂದ್ ಪಾಷಾ. ಆದರೆ ಮುಮ್ತಾಜ್ ತನ್ನ ಗಂಡ ಗೌರಿಬಿದನೂರಿಗೆ ಬಂದಿರೋದನ್ನು ಪೊಲೀಸರಿಗೆ ಖಚಿತಪಡಿಸಿದ್ದರು.

ಆರೋಪಿಗಳನ್ನು ಪೊಲೀಸರು ಆಂಧ್ರದ ಚೇಳೂರು ಗೇಟ್ ಬಳಿ ಬಂಧಿಸಿದರು.‌

ಗೌರಿಬಿದನೂರು ಸಿಪಿಐ ಎಸ್. ರವಿ ಹಾಗೂ ತಂಡ ಆರೋಪಿಗಳನ್ನು ಬಂಧಿಸುವಲ್ಲಿ
ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.