ADVERTISEMENT

ಚಿಕ್ಕಬಳ್ಳಾಪುರದಲ್ಲಿ ಭೂಕಂಪ: ಮನೆಯಿಂದ ಹೊರಗೆ ಓಡೋಡಿ ಬಂದ ಜನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:22 IST
Last Updated 22 ಡಿಸೆಂಬರ್ 2021, 19:22 IST
ಚಿಕ್ಕಬಳ್ಳಾಪುರ ತಾಲ್ಲೂಕು ಶೆಟ್ಟಗೆರೆಯಲ್ಲಿ ಭೂಕಂಪ ಸಂಭವಿಸಿದ ಕಾರಣ ಭಯಗೊಂಡು ಮನೆಯಿಂದ ಹೊರ ಬಂದಿರುವ ಮಹಿಳೆಯರು
ಚಿಕ್ಕಬಳ್ಳಾಪುರ ತಾಲ್ಲೂಕು ಶೆಟ್ಟಗೆರೆಯಲ್ಲಿ ಭೂಕಂಪ ಸಂಭವಿಸಿದ ಕಾರಣ ಭಯಗೊಂಡು ಮನೆಯಿಂದ ಹೊರ ಬಂದಿರುವ ಮಹಿಳೆಯರು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಂಡಿಕಲ್ ಮತ್ತು ಅಡ್ಡಗಲ್ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಬುಧವಾರ ಬೆಳಿಗ್ಗೆ ಲಘು ಭೂಕಂಪನ ಸಂಭವಿಸಿದೆ.

ಬಂಡಹಳ್ಳಿ, ಶೆಟ್ಟಗೆರೆ, ಬೋಗೇನ ಹಳ್ಳಿ, ಭೋಗಪರ್ತಿ, ಹೊಸಹಳ್ಳಿ, ದೊಡ್ಡಹಳ್ಳಿ,ಪಿಳ್ಳಗುಂಡಹಳ್ಳ, ಗುಂಡ್ಲ ಹಳ್ಳಿ, ಮಂಡಿಕಲ್, ಅಡ್ಡಗಲ್, ಪೈಲಗುರ್ಕಿ, ಆರೂರು, ಭೋಗಪರ್ತಿ ಯಲ್ಲಿ ನಿವಾಸಿಗಳಿಗೆ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಎರಡು ಬಾರಿ ಭೂಕಂಪನದ ಅನುಭವವಾಗಿದೆ.

‘ಬೆಳಿಗ್ಗೆ 7.09 ಮತ್ತು 7.14 ಗಂಟೆಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು ಕ್ರಮವಾಗಿ 3.1 ಹಾಗೂ 3.3ರಷ್ಟು ದಾಖಲಾಗಿದೆ’ ಎಂದುರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರವು (ಎನ್‌ಸಿಎಸ್) ಟ್ವೀಟ್ ಮಾಡಿದೆ.

ADVERTISEMENT

ಮಂಡಿಕಲ್ ಭೂಕಂಪನದ ಕೇಂದ್ರ ಬಿಂದುವಾಗಿದೆ. ಬಂಡ್ಲಹಳ್ಳಿ ಮತ್ತು ಶೆಟ್ಟಗೆರೆ ಗ್ರಾಮಗಳಲ್ಲಿ ಕೆಲವು ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಪಾತ್ರೆಗಳು ನೆಲಕ್ಕುರುಳಿವೆ. ಭೂಮಿಯು ಕಂಪಿಸುತ್ತಿದ್ದಂತೆ ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅಧಿಕಾರಿಗಳು ಗ್ರಾಮ ಗಳಿಗೆ ಭೇಟಿ ನೀಡಿದ್ದು, ‘ಇದು ಲಘು ಭೂಕಂಪನ. ಯಾವುದೇ ಅಪಾಯವಿಲ್ಲ’ ಎಂದು ಜನರಲ್ಲಿ ಧೈರ್ಯ ತುಂಬಿದರು.

ಭೂಕಂಪದಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಬಂಡಹಳ್ಳಿಯ ಮನೆಯೊಂದರ ಗೋಡೆಯಲ್ಲಿ ಬಿರುಕು ಮೂಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.