ಚಿಕ್ಕಬಳ್ಳಾಪುರ: ಜಿಲ್ಲೆಯ 18 ಶಿಕ್ಷಕರಿಗೆ 2025–26ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗಿದೆ. ಪ್ರಾಥಮಿಕ, ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಒಂದೊಂದು ವಿಭಾಗದಲ್ಲಿಯೂ ಆರು ಮಂದಿಗೆ ಪ್ರಶಸ್ತಿ ನೀಡಲಾಗಿದೆ.
ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಮಟ್ಟದ ಆಯ್ಕೆ ಸಮಿತಿ’ ಸಭೆಯು ಬುಧವಾರ ನಡೆದಿತ್ತು. ಗುರುವಾರವೂ ಮತ್ತೆ ಸಮಿತಿ ಸದಸ್ಯರು ಸಭೆ ನಡೆಸಿದ್ದ ಈ ಆಯ್ಕೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ಶುಕ್ರವಾರ (ಸೆ.5) ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಬಾಗೇಪಲ್ಲಿ ತಾಲ್ಲೂಕಿನ ಮರವಪಲ್ಲಿ ಶಾಲೆಯ ಮದ್ದಿರೆಡ್ಡಿ ವಿ., ಚಿಕ್ಕಬಳ್ಳಾಪುರ ತಾಲ್ಲೂಕು ನುಗುತಹಳ್ಳಿ ಶಾಲೆಯ ಶ್ರೀನಿವಾಸ ಎಂ.ವಿ., ಚಿಂತಾಮಣಿ ತಾಲ್ಲೂಕು ಟಿ.ವಡ್ಡಹಳ್ಳಿ ಶಾಲೆಯ ಟಿ.ಎನ್.ಶಮೀವುಲ್ಲಾ, ಗೌರಿಬಿದನೂರು ತಾಲ್ಲೂಕು ಪುಟ್ಟಾಪುರ್ಲಹಳ್ಳಿ ಶಾಲೆಯ ಅಶ್ವತ್ಥಪ್ಪ ಎಚ್., ಗುಡಿಬಂಡೆ ತಾಲ್ಲೂಕು ಉಪ್ಪಾರಹಳ್ಳಿ ಶಾಲೆಯ ಸಂತೋಷ್ ಕುಮಾರ್ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಅಮ್ಮೂರ ತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಾಗರತ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಬಾಗೇಪಲ್ಲಿ ತಾಲ್ಲೂಕು ಆಚೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವೆಂಕಟರೆಡ್ಡಿ ಕೆ.ಸಿ., ಚಿಕ್ಕಬಳ್ಳಾಪುರ ತಾಲ್ಲೂಕು ಕುಡುವತಿ ಶಾಲೆಯ ಎಸ್.ಆರ್.ಲತಾ, ಚಿಂತಾಮಣಿ ತಾಲ್ಲೂಕು ಸಿದ್ದೇಪಲ್ಲಿ ಶಾಲೆಯ ನಾಗರತ್ನಮ್ಮ ಎಂ., ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಶಾಲೆಯ ನರಸಮ್ಮ, ಗುಡಿಬಂಡೆ ತಾಲ್ಲೂಕು ಯಲಕಲರಾಳ್ಳಹಳ್ಳಿ ಶಾಲೆಯ ಜಿ.ಎನ್.ಶ್ರೀನಿವಾಸ್, ಶಿಡ್ಲಘಟ್ಟ ತಾಲ್ಲೂಕು ಸುಗುಟೂರು ಶಾಲೆಯ ತಾಜೂನ್ ಎಚ್. ಪ್ರಶಸ್ತಿ ಪಡೆದಿದ್ದಾರೆ.
ಪ್ರೌಢಶಾಲಾ ವಿಭಾಗ: ಬಾಗೇಪಲ್ಲಿ ತಾಲ್ಲೂಕಿನ ಘಂಟಂವಾರಿಪಲ್ಲಿ ಶಾಲೆಯ ರವಿ ಎಲ್., ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಶಾಲೆಯ ಸುಜಾತ ಜಿ.ಎಲ್., ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಶಾಲೆಯ ಶ್ರೀನಿವಾಸ ಎಂ., ಗೌರಿಬಿದನೂರು ತಾಲ್ಲೂಕಿನ ಬೈಚಾಪುರ ಶಾಲೆಯ ಸಿದ್ದಪ್ಪ ಟಿ., ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಶಾಲೆಯ ಲಕ್ಷ್ಮಿ ಕೆ.ಎಸ್., ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಬೃಂದ ಕೆ. ಅವರು ಪ್ರೌಢಶಾಲಾ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.