ADVERTISEMENT

ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:23 IST
Last Updated 7 ಫೆಬ್ರುವರಿ 2021, 1:23 IST
ಗೆದರೆ ಸರ್ಕಾರಿ ಪ್ರೌಢಶಾಲೆಗೆ ಕೋವಿಡ್ ಸುರಕ್ಷತಾ ಪರಿಕರಗಳನ್ನು ವಿತರಣೆ ಮಾಡಿದ ನಮ್ಮ ಚಾಲಕರ ಯೂನಿಯನ್ ಟ್ರೇಡ್‌ನ ಗೌರವಾಧ್ಯಕ್ಷ ಕೆ.ಎಚ್. ಪದ್ಮರಾಜ್ ಜೈನ್
ಗೆದರೆ ಸರ್ಕಾರಿ ಪ್ರೌಢಶಾಲೆಗೆ ಕೋವಿಡ್ ಸುರಕ್ಷತಾ ಪರಿಕರಗಳನ್ನು ವಿತರಣೆ ಮಾಡಿದ ನಮ್ಮ ಚಾಲಕರ ಯೂನಿಯನ್ ಟ್ರೇಡ್‌ನ ಗೌರವಾಧ್ಯಕ್ಷ ಕೆ.ಎಚ್. ಪದ್ಮರಾಜ್ ಜೈನ್   

ಗೌರಿಬಿದನೂರು: ಗ್ರಾಮೀಣ ಭಾಗದ ಸರ್ಕಾರಿ ‌ಶಾಲೆಯಲ್ಲಿನ ವಿದ್ಯಾರ್ಥಿಗಳು ದಾನಿಗಳು ‌ಮತ್ತು‌ ಸಂಘ, ಸಂಸ್ಥೆಗಳು ನೀಡುವ ಸಹಕಾರ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಶ್ರೀನಿವಾಸಮೂರ್ತಿ ತಿಳಿಸಿದರು.

ತಾಲ್ಲೂಕಿನ ಗೆದರೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ನೆರವಾಗುವ ನಿಟ್ಟಿನಲ್ಲಿ ನಮ್ಮ ಚಾಲಕರ ಟ್ರೇಡ್ ಯೂನಿಯನ್ ವತಿಯಿಂದ ವಿತರಿಸಿದ ಮಾಸ್ಕ್, ಸ್ಯಾನಿಟರಿ, ಥರ್ಮಲ್ ಸ್ಕ್ರೀನಿಂಗ್‌ ಸೇರಿದಂತೆ ‌ಇನ್ನಿತರ ಪರಿಕರಗಳನ್ನು ಪಡೆದು ಅವರು ಮಾತನಾಡಿದರು.

ಸ್ಥಳೀಯ ದಾನಿಗಳು ‌ಹಾಗೂ ಸಂಘ, ಸಂಸ್ಥೆಗಳು ಸರ್ಕಾರಿ‌ ಶಾಲೆಯ ವಿದ್ಯಾರ್ಥಿಗಳ ‌ಸುರಕ್ಷತೆಯ ದೃಷ್ಟಿಯಿಂದ ನೀಡುವ ಪರಿಕರಗಳು ಅವರ ಸುಸ್ಥಿರವಾದ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ ಎಂದರು.

ADVERTISEMENT

ನಮ್ಮ ಚಾಲಕರ ‌ಯೂನಿಯನ್ ಟ್ರೇಡ್‌ನ ರಾಜ್ಯ ಗೌರವಾಧ್ಯಕ್ಷ ಕೆ.ಎಚ್. ಪದ್ಮರಾಜ್ ಜೈನ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ‌ಮಾಡುವ ವಿದ್ಯಾರ್ಥಿಗಳು ದೇಶದ ಭವಿಷ್ಯ ನಿರ್ಧರಿಸುವಂತಹ ಶಕ್ತಿ‌ ಮತ್ತು ಚಾಣಾಕ್ಷತನ ಹೊಂದಿರುತ್ತಾರೆ ಎಂದರು.

ಮುಖ್ಯಶಿಕ್ಷಕರಾದ ಜಿ.ಎನ್. ವಾಸನ್, ಪಿಎಸ್‌ಐ ಮೋಹನ್, ನಮ್ಮ ಚಾಲಕರ ಯೂನಿಯನ್ ಟ್ರೇಡ್‌ನ ಜಿಲ್ಲಾ ಘಟಕದ ಅಧ್ಯಕ್ಷ ಛತ್ರಂ ಶ್ರೀಧರ್, ಟಿಪಿಒ ಹನುಮಂತರೆಡ್ಡಿ, ಪಿಡಿಒ ಸತ್ಯಪ್ರಸಾದ್, ಶಿಕ್ಷಕರಾದ ಜಿ.ಸಿ. ರಾಮಚಂದ್ರಯ್ಯ, ರಮೇಶ್, ಎ. ಭಾರತಿ, ಅಂಜಿನಪ್ಪ, ನಾಗರಾಜು, ಪೆದ್ದಗಂಗಪ್ಪ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.