
ಪ್ರಜಾವಾಣಿ ವಾರ್ತೆ
ಚಿಕ್ಕಬಳ್ಳಾಪುರ: ಗೋವಿನ ಶಾಪದಿಂದಲೇ ಸಿದ್ದರಾಮಯ್ಯ ಅವರ ಸರ್ಕಾರ ಬೀಳುತ್ತದೆ. ಸರ್ಕಾರ ಬೀಳಬಾರದು ಎಂದರೆ ಸಿದ್ದರಾಮಯ್ಯ ಅವರು ಗೋದಾನ ಕಾರ್ಯಕ್ರಮ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ತಾಲ್ಲೂಕಿನ ಕವರನಹಳ್ಳಿ ಬಳಿ ನಡೆದ ಗೋದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಹಳ್ಳಿಗಳಲ್ಲಿನ ಬಡವರ ಮನೆಗೆ ಗೋವು ದಾನವನ್ನು ಸರ್ಕಾರ ನೀಡಿದರೆ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಹಸುಗಳ ಕೆಚ್ಚಲು ಕತ್ತರಿಸುವವರಿಗೆ, ಗೋವುಗಳನ್ನು ಕಡಿಯುವವರಿಗೆ, ಕಳ್ಳತನ ಮಾಡುವವರಿಗೆ ಬೆಂಬಲ ನೀಡುತ್ತಿದೆ ಎಂದು ದೂರಿದರು.
ಗೋವಿನ ಶಾಪದಿಂದಲೇ ಈ ಸರ್ಕಾರ ಬೀಳುತ್ತದೆ. ಸರ್ಕಾರ ಉಳಿಯಬೇಕು ಎಂದರೆ ಗೋದಾನ ಕಾರ್ಯಕ್ರಮ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.