ಶಿಡ್ಲಘಟ್ಟ: ತಾಲ್ಲೂಕಿನ ಸೊಣ್ಣೇನಹಳ್ಳಿಯ ಚೇತನ್ ಅವರಿಗೆ ಸೇರಿರುವ ನೀಲಗಿರಿ ತೋಪಿಗೆ ಸೋಮವಾರ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳದವರು ನಂದಿಸಿದ್ದಾರೆ.
ಆರು ಎಕರೆ ನೀಲಗಿರಿ ತೋಪಿನಲ್ಲಿ ಒಂದೂವರೆ ಎಕರೆಯಷ್ಟು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದವರು ಸಮಯಕ್ಕೆ
ಬಂದು ನೀರು, ಹೊಂಗೆಸೊಪ್ಪು ಮತ್ತು ನೀಲಗಿರಿ ಸೊಪ್ಪಿನಿಂದ ಬೆಂಕಿ ನಂದಿಸಿದರು. ಸೊಣ್ಣೇನಹಳ್ಳಿ ಗ್ರಾಮಸ್ಥರೂ ಸಹ ಬೆಂಕಿ ನಂದಿಸಲು ನೆರವಾಗಿದ್ದಾರೆ.
ಅಗ್ನಿಶಾಮಕ ದಳ ಠಾಣಾಧಿಕಾರಿ ಕೆ.ರಾಮಕೃಷ್ಣ, ಅಧಿಕಾರಿಗಳಾದ ಪಿ.ಆರ್.ಶ್ರೀನಿವಾಸ್, ಅಶೋಕ್, ಮಹಂತೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.