ಗೌರಿಬಿದನೂರು: ತಾಲ್ಲೂಕಿನ ಚಿಕ್ಕಕುರುಗೋಡು ಗ್ರಾಮದ ಕಡೆ ಗ್ರಾಮಾಂತರ ಪೊಲೀಸರು ಜುಲೈ 19ರ ರಾತ್ರಿ ಡಕಾಯಿತಿಗೆ ಹೊಂಚು ಹಾಕುತ್ತಿದ್ದವರನ್ನು ಬಂಧಿಸಿದ್ದಾರೆ.
ರಾಜಲಕ್ಷ್ಮಿ ದೇವಸ್ಥಾನಕ್ಕೆ ಹೋಗುವ ಆರ್ಚ್ ಬಳಿ 7 ಜನರು ಮಾರಕ ಆಯುಧ ಹಿಡಿದು ರಸ್ತೆಯಲ್ಲಿ ಬರುವ ವಾಹನ ಮತ್ತು ಜನರನ್ನು ಅಡ್ಡಗಟ್ಟಿ ಹೆದರಿಸಿ ಅವರ ಬಳಿ ಇರುವ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿದ್ದ ಸಂದೀಪ (26), ಉಮೇಶ (24), ಕುಮಾರ (28), ಗಣೇಶ್ ಸಿ.ಎನ್ (24), ರಂಜಿತ್ ಕುಮಾರ್ (30), ಗೋಪಿನಾಥ, ಸಿ.ಎನ್ ಸುರೇಶ (22) ರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಆರೋಪಿತರು ಚಿಕ್ಕಕುರುಗೋಡು ಗ್ರಾಮದವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.