ಗೌರಿಬಿದನೂರು: ನಗರದ ಶನಿಮಹಾತ್ಮಾ ದೇವಸ್ಥಾನದ ಆವರಣದಲ್ಲಿ ಬಿಜೆಪಿ ನಗರ ಮಂಡಲದಿಂದ ಯೋಗ ದಿನಾಚರಣೆ ಶನಿವಾರ ನಡೆಯಿತು.
ಯೋಗ ಗುರು ಜಗದೀಶ್, ರಮೇಶ್, ರವಿ ಯೋಗಾಭ್ಯಾಸ ಮಾಡಿಸಿದರು.
ನಗರ ಬಿಜೆಪಿ ಅಧ್ಯಕ್ಷ ಮಾರ್ಕೆಟ್ ಮೋಹನ್ ಮಾತನಾಡಿ, ಯೋಗವು ವ್ಯಕ್ತಿಯ ಆರೋಗ್ಯ ಬಲಪಡಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ದೈನಂದಿನ ಜೀವನದಲ್ಲಿ ಅರಿವನ್ನು ಬೆಳೆಸುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರ ಜೀವನ ನಡೆಸಬಹುದು ಎಂದು ತಿಳಿಸಿದರು.
ದೇವಾಲಯದ ಅಧ್ಯಕ್ಷ ಸೂರಣ್ಣ, ವೇಣುಮಾಧವ, ದಾಲ್‌ರಮೇಶ್, ಮಂಜುನಾಥ ರಾವ್, ರಾಘವೇಂದ್ರ ವೆಂಕಟಾದ್ರಿ, ಈಶ್ವರ್, ಆದಿತ್ಯ ಮಂಜು, ಶಾಂತಕುಮಾರ್ ಡೈರಿ ರಮೇಶ್, ಮುದ್ದುಕೃಷ್ಣ, ಪಾರ್ವತಮ್ಮ, ಅಜಯ್, ಮಾರುತಿ, ಪರಿನಿಧಿ ಮಂಜು, ಮಣಿಕಂಠ, ದ್ವಾರಕೀಶ್, ಧನಂಜಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.