ADVERTISEMENT

ಬಾಗೇಪಲ್ಲಿ: ಹೆಚ್ಚಾದ ಮಹಿಳೆಯರ, ಮಕ್ಕಳ ಭಿಕ್ಷಾಟನೆ- ಸಾರ್ವಜನಿಕರ ಬೇಸರ

ಅಧಿಕಾರಿಗಳ ಜಾಣಮೌನಕ್ಕೆ ಸಾರ್ವಜನಿಕರ ಬೇಸರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 3:01 IST
Last Updated 23 ಫೆಬ್ರುವರಿ 2026, 3:01 IST
ಬಾಗೇಪಲ್ಲಿ ಹೊರವಲಯದ ಟಿ.ಬಿ.ಕ್ರಾಸ್‌ನ ಹೋಟೆಲ್ ಮುಂದೆ ಭಿಕ್ಷಾಟನೆಯಲ್ಲಿ ತೊಡಗಿರುವ ಮಹಿಳೆ
ಬಾಗೇಪಲ್ಲಿ ಹೊರವಲಯದ ಟಿ.ಬಿ.ಕ್ರಾಸ್‌ನ ಹೋಟೆಲ್ ಮುಂದೆ ಭಿಕ್ಷಾಟನೆಯಲ್ಲಿ ತೊಡಗಿರುವ ಮಹಿಳೆ   

ಬಾಗೇಪಲ್ಲಿ: ಪಟ್ಟಣ ಮತ್ತು ಹೊರವಲಯದ ಟಿ.ಬಿ.ಕ್ರಾಸ್‌ನ‌ ಹೋಟೇಲ್, ದಿನಸಿ ಅಂಗಡಿಗಳ ಮುಂದೆ ಮಹಿಳೆಯರು ಜೋಲಿಗೆಯಲ್ಲಿ ಸಣ್ಣ ಕಂದಮ್ಮಗಳನ್ನು ತೋರಿಸಿ ಭಿಕ್ಷಾಟನೆಯಲ್ಲಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣ ಮೌನ‌ ವಹಿಸಿದ್ದಾರೆ.

ಪಟ್ಟಣದ ಡಿವಿಜಿ ಮುಖ್ಯರಸ್ತೆ, ಡಾ.ಎಚ್.ಎನ್.ವೃತ್ತ, ಚಿತ್ರಾವತಿ ಹೋರಾಟ ವೃತ್ತ, ಸಿವಿಲ್ ನ್ಯಾಯಾಲಯದ ಮುಂದೆ, ಹೊರವಲಯದ ಟಿ.ಬಿ.ಕ್ರಾಸ್ ಅಂಗಡಿ, ಹೋಟೆಲ್, ಕಾಫಿ, ಟೀ ಅಂಗಡಿಗಳ ಮುಂದೆ ಪ್ರತಿದಿನ ಮಹಿಳೆಯರ, ಮಕ್ಕಳ ಭಿಕ್ಷಾಟನೆ ಹೆಚ್ಚಾಗಿದೆ.

ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಹೋಗಿಬರುವ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರಿಂದ ಭಿಕ್ಷೆ ಬೇಡು ಮಹಿಳೆಯರು, ಮಕ್ಕಳು ಹೆಚ್ಚಾಗಿದ್ದಾರೆ.

ADVERTISEMENT

ನಿರ್ಗತಿಕರಿಗೆ ಪುನರ್ವಸತಿ, ಆರೋಗ್ಯ, ನಿವೇಶನ, ಮನೆ, ಶಿಕ್ಷಣ ಕಲ್ಪಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರಿ ವಾಹನಗಳಲ್ಲಿ ಸಂಚರಿಸುತ್ತಾರೆ. ಕಣ್ಣುಮುಂದೆಯೇ ಭಿಕ್ಷಾಟನೆ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಜಾಣಮೌನ ವಹಿಸಿದ್ದಾರೆ ಎಂದು ಹೊಸಹುಡ್ಯದ ಮಹೇಶ್ ತಿಳಿಸಿದರು.

ಸರ್ಕಾರ ನಿರ್ಗತಿಕರ ಕಲ್ಯಾಣ ಯೋಜನೆಗೆ ಕೋಟ್ಯಂತರ ಹಣ ವ್ಯಯ ಮಾಡುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಭಿಕ್ಷಾಟನೆ ಹೆಚ್ಚಾಗಿದೆ. ಕಾಲಕಾಲಕ್ಕೆ ಅಧಿಕಾರಿಗಳು ಗಮನ ಹರಿಸಿದರೆ ಭಿಕ್ಷಾಟನೆ ನಿರ್ಮೂಲನೆ ಅಗಬಹುದು ಎಂದು ವಕೀಲ ಕೃಷ್ಣಾಪುರ ರಮೇಶ್ ಹೇಳಿದರು.

ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಭಿಕ್ಷಾಟನೆ ನಿಂತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಭಿಕ್ಷಾಟನೆ ನಿಲ್ಲಿಸಬೇಕು ಎಂದು ಜನಪರ ಹೋರಾಟಗಾರ್ತಿ ಸಾಯಿಜ್ಯೋತಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.