
ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಗಲಗುರ್ಕಿ ಈಶ ಯೋಗ ಕೇಂದ್ರಕ್ಕೆ ಶಿವರಾತ್ರಿ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು.
ಕೊಯಮತ್ತೂರಿನ ಈಶ ಯೋಗಕೇಂದ್ರದಲ್ಲಿ ನಡೆದ ಮಹಾಶಿವರಾತ್ರಿ ಆಚರಣೆ ನೇರ ಪ್ರಸಾರವನ್ನು ರಾತ್ರಿ ಸೇರಿದ್ದ ಭಕ್ತರು ಕಣ್ತುಂಬಿಕೊಂಡರು. ರಾಸುಗಳ ಪ್ರದರ್ಶನವೂ ಇತ್ತು. ಅಪಾರ ಸಂಖ್ಯೆಯಲ್ಲಿ ಬಂದ ಜನರು ವಿವಿಧ ತಳಿಗಳ ರಾಸು ಕಣ್ತುಂಬಿಕೊಂಡರು.
ಯೋಗೇಶ್ವರ ಲಿಂಗ ಮತ್ತು ನಾಗಮಂಟಪದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಬಿಎಂಟಿಸಿಯು ಬೆಂಗಳೂರಿನಿಂದ ನಂದಿ, ರಂಗಸ್ಥಳ ಮತ್ತು ಈಶಾ ಯೋಗ ಕೇಂದ್ರಕ್ಕೆ ವಿಶೇಷ ಪ್ರವಾಸದ ಪ್ಯಾಕೇಜ್ ನೀಡಿತ್ತು. 100 ಬಿಎಂಟಿಸಿ ಬಸ್‌ಗಳು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ನಡುವೆ ಸಂಚರಿಸಿವು. ಈಶಾ ಯೋಗ ಕೇಂದ್ರದ ರಸ್ತೆಗಳಲ್ಲಿ ವಾಹನ ಮತ್ತು ಜನ ದಟ್ಟಣೆ ಹೆಚ್ಚಿತ್ತು.
ಕಳೆದ ವರ್ಷದ ಶಿವರಾತ್ರಿ ಸಂದರ್ಭದಲ್ಲಿ ಎರಡು ಲಕ್ಷ ಭಕ್ತರು ಕೇಂದ್ರಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.