
ಚಿಂತಾಮಣಿ: ತಾಲ್ಲೂಕಿನ ಪುರಾಣ ಪ್ರಸಿದ್ಧ ಕೈವಾರ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಹುಣ್ಣಿಮೆ ದಿನ ಬುಧವಾರ ರಾತ್ರಿ ಲಕ್ಷದೀಪೋತ್ಸವ ಶ್ರದ್ಧಾ, ಭಕ್ತಿ ಹಾಗೂ ಸಡಗರದಿಂದ ನಡೆಯಿತು.
ಭೀಮಲಿಂಗೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ತಳಿರು ತೋರಣ ಕಟ್ಟಲಾಗಿತ್ತು. ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ಕುಟುಂಬ ಸಮೇತ ದೇವಸ್ಥಾನಕ್ಕೆ ಬಂದು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಮಂಗಳಾರತಿ ಸಲ್ಲಿಸಿದರು. ಹಣ್ಣು, ಕಾಯಿ, ಹೂವು, ಬಿಲ್ವಪತ್ರೆ ಅರ್ಪಿಸಿದರು. ಭಕ್ತರು ದೇವರಿಗೆ ಕೈಮುಗಿದು ಆಯುಷ್ಯ, ಆರೋಗ್ಯ ಹಾಗೂ ಸಂಪತ್ತು ವೃದ್ಧಿಯಾಗಲೆಂದು ಆಶೀರ್ವಾದ ಪಡೆದರು.
ವಿಶೇಷ ಪೂಜೆ, ಹೋಮ, ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮ ಭಕ್ತಿಯಿಂದ ನಡೆಯಿತು. ಪಾರ್ವತಿ ಅಮ್ಮನವರಿಗೂ ವಿಶೇಷ ಅಭಿಷೇಕ, ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ ಮಾಡಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ದೀಪಗಳನ್ನು ಬೆಳಗುವುದರಿಂದ ಅಜ್ಞಾನ ಅಂಧಕಾರ ತೊಲಗಿ ಜ್ಞಾನದ ಬೆಳಕು ಅರಳುತ್ತದೆ. ನಮ್ಮಲ್ಲಿರುವ ಅಹಂಕಾರ ಎಂಬ ಕತ್ತಲೆ ಅಳಿದು ನಯ, ವಿನಯ, ಭಕ್ತಿ ಭಾವದ ಬೆಳಕು ಹೃದಯದಲ್ಲಿ ಬೆಳಗುತ್ತದೆ. ಭಾರತದಲ್ಲಿ ಹಬ್ಬಗಳ ವೈಶಿಷ್ಟ್ಯವೆಂದರೆ ಬರಿ ಸಂಭ್ರಮ ಪಡುವುದು ಅಷ್ಟೇ ಅಲ್ಲ. ಸಾಮಾಜಿಕ, ಆಧ್ಯಾತ್ಮಿಕ, ವೈಜ್ಞಾನಿಕ ಬಲವನ್ನು ಒಳಗೊಂಡಿರುತ್ತದೆ ಎಂದರು.
‘ಪ್ರತಿವರ್ಷ ಕಾರ್ತಿಕ ಹುಣ್ಣಿಮೆಯಂದು ಭೀಮಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಬಂದು ಕಾರ್ತಿಕ ದೀಪವನ್ನು ಹೊತ್ತಿಸುತ್ತೇವೆ. ಹಲವು ವರ್ಷಗಳಿಂದ ಈ ಪದ್ಧತಿಯನ್ನು ರೂಢಿಸಿಕೊಳ್ಳಲಾಗಿದೆ ಎಂದು ದೇವಾಲಯಕ್ಕೆ ಬಂದಿದ್ದ ಗೃಹಿಣಿಯರಾದ ಪಲ್ಲವಿ ಮತ್ತು ಪೂಜಾ ತಿಳಿಸಿದರು.
ಮಠದ ಟ್ರಸ್ಟ್ ಉಪಾಧ್ಯಕ್ಷ ವಿಭಾಕರ ರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ವ್ಯವಸ್ಥಾಪಕ ಲಕ್ಷ್ಮಿ ನಾರಾಯಣ, ಪ್ರವಚನಕಾರ ಆನಂದ, ವೆಂಕಟರಮಣ, ವೆಂಕಟೇಶ್, ನಾರಾಯಣಸ್ವಾಮಿ, ಮದ್ದಿರೆಡ್ಡಿ, ಜಯಮ್ಮ, ಶ್ರೀನಿವಾಸ್, ಕೃಷ್ಣ, ಶ್ರೀಧರ ಹಿರೇಮಠ್ ಮತ್ತು ಕೈವಾರ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲ್ಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಕೈವಾರದಲ್ಲಿ ಶ್ರೀ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತೀಕ ಮಾಸದ ಹುಣ್ಣಿಮೆ ಬುಧವಾರ ರಾತ್ರಿ ಲಕ್ಷದೀಪೋತ್ಸವ ಕಾರ್ಯಕ್ರಮ ಶ್ರದ್ಧಾ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ನಡೆಯಿತು.
ಭೀಮಲಿಂಗೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಅವರಣದಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ತಳಿರು ತೋರಣ ಕಟ್ಟಿ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಭಕ್ತರು ಬೆಳಿಗ್ಗೆಯಿಂದಲೇ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಬಂದು ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು. ಹಣ್ಣು ಕಾಯಿ ಹೂವು ಬಿಲ್ವ ಪತ್ರಿ ಅರ್ಪಿಸಿದರು. ಭಕ್ತರು ದೇವರಿಗೆ ಕೈ ಮುಗಿದು ಆಯುಷ್ಯ, ಆರೋಗ್ಯಹಾಗೂ ಸಂಪತ್ತು ವೃದ್ಧಿಸಲೆಂದು ಆಶೀರ್ವಾದ ಪಡೆದುಕೊಂಡರು.
ಭೀಮಲಿಂಗೇಶ್ವರ ಲಿಂಗಕ್ಕೆ ಮಹಾನ್ಯಾಸಪೂರ್ವಕ ರುದ್ರಾಭಿಷೇಕವನ್ನು ಹಾಗೂ ರುದ್ರಹೋಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ವಿಶೇಷ ಪೂಜೆ, ಹೋಮ,ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಯಿಂದ ನಡೆದವು. ಪಾರ್ವತಿ ಅಮ್ಮನವರಿಗೂ ವಿಶೇಷ ಅಭಿಷೇಕ, ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ ಮಾಡಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ಷೇತ್ರದ ಧರ್ಮಧಿಕಾರಿ ಡಾ.ಎಂ.ಆರ್ ಜಯರಾಮ್, ದಿಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ದೀಪಗಳನ್ನು ಬೆಳಗುವುದರಿಂದ ಅಜ್ಞಾನ ಅಂಧಕಾರ ತೊಲಗಿ ಜ್ಞಾನದ ಬೆಳಕು ಅರಳುತ್ತದೆ. ನಮ್ಮಲ್ಲಿರುವ ಅಹಂಕಾರ ಎಂಬ ಕತ್ತಲೆ ಅಳಿದು ನಯ ವಿನಯ, ಭಕ್ತಿ ಭಾವದ ಬೆಳಕು ನಮ್ಮ ಹೃದಯದಲ್ಲಿ ಬೆಳಗುತ್ತದೆ. ಭಾರತದಲ್ಲಿ ಹಬ್ಬಗಳ ವೈಶಿಷ್ಟವೆಂದರೆ ಬರಿ ಸಂಭ್ರಮ ಪಡುವುದು ಅಷ್ಟೇ ಅಲ್ಲ ಸಾಮಾಜಿಕ, ಆದ್ಯಾತ್ಮಿಕ, ವೈಜ್ಞಾನಿಕ ಆಧ್ಯಾತ್ಮಿಕ ಬಲವನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ಮಹಿಳೆಯರು ಭಕ್ತಿ-ಶ್ರದ್ಧೆಯಿಂದ ಕಾರ್ತೀಕ ದೀಪವನ್ನು ನಿಂಬೆ ಹಣ್ಣು, ಪಣತಿಗಳಲ್ಲಿ ಹಚ್ಚಿ ಶ್ರೀ ಭೀಮಲಿಂಗೇಶ್ವರಸ್ವಾಮಿಗೆ ಬೆಳಗಿದರು. ಸಂಜೆ ದೇವಾಲಯ ಹಾಗೂ ಆವರಣದಲ್ಲಿ ಲಕ್ಷ ದೀಪೋತ್ಸವ ನಡೆಯಿತು. ಭಕ್ತರು ಕಂಡ ಕಂಡದಲ್ಲಿ ದೀಪಗಳನ್ನು ಹೊತ್ತಿಸಿ ಸಂಭ್ರಮಿಸಿದರು.
ಪ್ರತಿವರ್ಷ ಕಾರ್ತೀಕ ಹುಣ್ಣಿಮೆಯಂದು ಭೀಮಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಬಂದು ಕಾರ್ತೀಕ ದೀಪವನ್ನು ಹೊತ್ತಿಸುತ್ತೇವೆ. ಹಲವಾರು ವರ್ಷಗಳಿಂದ ಈ ಪದ್ದತಿಯನ್ನು ರೂಡಿಸಿಕೊಂಡಿದ್ದೇವೆ ಎಂದು ದೇವಾಲಯಕ್ಕೇ ಆಗಮಿಸಿದ್ದ ಗೃಹಣಿಯರಾದ ಪಲ್ಲವಿ ಮತ್ತು ಪೂಜಾ ತಿಳಿಸಿದರು.
ಶ್ರೀ ಮಠದ ಟ್ರಸ್ಟ್ ಉಪಾಧ್ಯಕ್ಷ ವಿಭಾಕರ ರೆಡ್ಡಿ, ಖಜಾಂಚಿ ಆರ್. ಪಿ .ಎಂ ಸತ್ಯ ನಾರಾಯಣ, ವ್ಯವಸ್ಥಾಪಕ ಲಕ್ಷ್ಮಿ ನಾರಾಯಣ, ಪ್ರವಚನಕಾರ ಆನಂದ, ವೆಂಕಟರಮಣ, ವೆಂಕಟೇಶ್, ನಾರಾಯಣಸ್ವಾಮಿ, ಮದ್ದಿರೆಡ್ಡಿ, ಜಯಮ್ಮ, ಶ್ರೀನಿವಾಸ್, ಕೃಷ್ಣ, ಶ್ರೀಧರ ಹಿರೇಮಠ್ ಮತ್ತು ಕೈವಾರ ಹಾಗೂ ಸುತ್ತ ಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡು ಭೀಮಲಿಂಗೇಶ್ವರ ಕೃಪೆಗೆ ಪಾತ್ರರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.