ADVERTISEMENT

ಮಹನೀಯರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣ: ಸುಧಾಕರ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 4:07 IST
Last Updated 1 ನವೆಂಬರ್ 2021, 4:07 IST
ಸಚಿವ ಡಾ.ಕೆ.ಸುಧಾಕರ್
ಸಚಿವ ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಮಹನೀಯರ ಹೋರಾಟದ ಫಲವಾಗಿ ಏಕೀಕರಣಗೊಂಡಿತು ಎಂದು ಜಿಲ್ಕಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಆಲೂರು ವೆಂಕಟರಾಯರು, ಕುವೆಂಪು, ಅ.ನಾ.ಕೃಷ್ಣರಾಯರು ಸೇರಿದಂತೆ ಹಲವರು ಏಕೀಕರಣಕ್ಕೆ ಅವಿರತ ಹೋರಾಟ ಮಾಡಿದರು. ಕರ್ನಾಟಕದ ಜನರ ಬಗ್ಗೆ ವಿಶೇಷ ಗೌರವವನ್ನು ದೇಶದ ಜನರು ಇಟ್ಟುಕೊಂಡಿದ್ದಾರೆ. ಅದಕ್ಕೆ ನಮ್ಮ ಸೌಹಾರ್ದ ಕಾರಣ ಎಂದರು.

ADVERTISEMENT

108 ಭಾಷೆಯ ಜನರು ಬೆಂಗಳೂರಿನಲ್ಲಿ ಇದ್ದಾರೆ. ನೆಮ್ಮದಿಯಿಂದ ಬದುಕುತಿದ್ದಾರೆ. ಇದು ನಮ್ಮ ವೈಶಾಲ್ಯವನ್ನು ತೋರುತ್ತದೆ ಎಂದರು.

ಜಿಲ್ಲೆಯ ಜನರು ಈ ನಾಡ ಹಬ್ಬವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಬೇಕು ಎಂದರು.

ಧ್ವಜಾರೋಹಣ ನೆರವೇರಿಸಿದ ನಂತರ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.