ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಮಂಗಳವಾರ ಬೆಳಿಗ್ಗೆಯಿಂದಲೇ ತುಂತುರು ಮಳೆ ಸುರಿಯಿತು. ನಿದ್ದೆಯಲ್ಲಿದ್ದ ಜನರು ಬೆಳ್ಳಂ ಬೆಳಿಗ್ಗೆ ಎಚ್ಚರವಾದ ವೇಳೆಯಲ್ಲಿ ಕಂಡಿದ್ದು ತುಂತುರು ಮಳೆ.
ಶಾಲಾ ಕಾಲೇಜಿಗೆ ಹೊರಟ ವಿದ್ಯಾರ್ಥಿಗಳು, ಕಚೇರಿಗಳಿಗೆ ಹೊರಟವರು ಕೊಡೆ ಹಿಡಿದು, ಜರ್ಕಿನ್‌ಗಳನ್ನು, ರೈನ್‌ಕೋಟ್‌ಗಳನ್ನು ತೊಟ್ಟು ಸಾಗಿದ್ದು ಎಲ್ಲೆಡೆ ಕಂಡಿತು.
ತುಂತುರು ಮಳೆಯ ಥಂಡಿಗೆ ಹಿರಿಯರು, ಮಕ್ಕಳು ಹೈರಾಣಾದರು. ಮಧ್ಯಾಹ್ನದ ನಂತರ ಮಳೆ ಬಿಡುವು ನೀಡಿತು. ಸಂಜೆಯವರೆಗೂ ಜಿಲ್ಲೆಯಲ್ಲಿ ಬಿಸಿಲ ಸುಳಿವು ಇರಲಿಲ್ಲ.
ಚಿಕ್ಕಬಳ್ಳಾಪುರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ತಂಪಾದ ವಾತಾವರಣವಿತ್ತು. ತಾಲ್ಲೂಕಿನ ಪ್ರಸಿದ್ಧ ನಂದಿಗಿರಿಧಾಮವನ್ನು ಮಂಜು ಹೊದ್ದಿದ್ದರೆ ಮತ್ತೊಂದು ಕಡೆ ತುಂತುರು ಮಳೆ ಮತ್ತಷ್ಟು ಆಹ್ಲಾದಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.