ADVERTISEMENT

ಭೈರಪ್ಪಗೆ ಕಸಾಪ ನುಡಿನಮನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:11 IST
Last Updated 28 ಸೆಪ್ಟೆಂಬರ್ 2025, 6:11 IST
ಸಾಹಿತಿ ಭೈರಪ್ಪ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನುಡಿನಮನ ಸಲ್ಲಿಸಲಾಯಿತು
ಸಾಹಿತಿ ಭೈರಪ್ಪ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನುಡಿನಮನ ಸಲ್ಲಿಸಲಾಯಿತು   

ಗುಡಿಬಂಡೆ: ದಿ.ಎಸ್.ಎಲ್. ಭೈರಪ್ಪ ಅವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶುಕ್ರವಾರ ನುಡಿನಮನ ಸಲ್ಲಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ನಾಮನಿರ್ದೇಶನ ಸದಸ್ಯೆ ಅನುರಾಧ ಆನಂದ್ ಮಾತನಾಡಿ, ಭೈರಪ್ಪ ನಿಧನದಿಂದಒಬ್ಬ ಶ್ರೇಷ್ಠ ಚಿಂತಕ, ಸಾಹಿತಿಯನ್ನು ಕಳೆದುಕೊಂಡಿದ್ದೇವೆ. ಅವರ ಅನೇಕ ಕಾದಂಬರಿಗಳು ಬೇರೆ ಬೇರೆ ಭಾಷೆಗೆ ಅನುವಾದಗೊಂಡಿವೆ. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.

7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಿ. ಅಮೀರ್ ಜಾನ್ ಮಾತನಾಡಿ, ಭೈರಪ್ಪನವರನ್ನು ಅಗಲಿ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಇವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿತ್ತು ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಮಂಜುನಾಥ್, ವಾಹಿನಿ ಎಚ್.ಆರ್.ಸುರೇಶ್, ಗುಂಪುಮರದ ಆನಂದ್, ಪಿಡಿಒ ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.