ADVERTISEMENT

ಕಸಾಪ ಅಧ್ಯಕ್ಷರ ಆಯ್ಕೆ: ಹಿರಿಯರ ಕಡೆಗಣನೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:14 IST
Last Updated 26 ಜನವರಿ 2022, 3:14 IST

ಬಾಗೇಪಲ್ಲಿ: ಗಡಿ ಭಾಗದ ತಾಲ್ಲೂಕಿನಲ್ಲಿ 30 ವರ್ಷಗಳಿಂದ ಕನ್ನಡ ನಾಡು, ನುಡಿ, ನೆಲ, ಜಲ, ಕಲೆ, ಸಾಹಿತ್ಯ ಸೇವೆ ಮಾಡಿದಂತಹ ನನ್ನಂತಹ ಹಿರಿಯರನ್ನು ಪರಿಗಣನೆಗೆ ತೆಗೆದುಕೊಳ್ಳದೆ ತಾಲ್ಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ನ್ಯಾಷನಲ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ಕೆ. ನಿಂಗಪ್ಪ ದೂರಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಯಾವುದೇ ಚುನಾವಣೆ ನಡೆದರೂ ಬಹುಮತದ ಸದಸ್ಯರ ಒಪ್ಪಿಗೆ ಪಡೆದು ನಡೆಸಬೇಕು. ತಾಲ್ಲೂಕಿನಲ್ಲಿ ಕಸಾಪದ 215 ಸದಸ್ಯರು ಇದ್ದಾರೆ. ಆದರೆ, ಸದಸ್ಯರ ಗಮನಕ್ಕೆ ತರದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೋಡಿರಂಗಪ್ಪ ಪಟ್ಟಣದ ಸತ್ಯಸಾಯಿ ಧರ್ಮಶಾಲೆಯಲ್ಲಿ 6-7 ಸದಸ್ಯರನ್ನು ಕರೆಯಿಸಿಕೊಂಡು ತಾಲ್ಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ಬೇಸರ ತಂದಿದೆ ಎಂದು ಟೀಕಿಸಿದರು.

ADVERTISEMENT

‘ಜಿಲ್ಲಾ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ. ಆಂಧ್ರಪ್ರದೇಶದ ಗಡಿ ತಾಲ್ಲೂಕಿನಲ್ಲಿ ನೆಲ, ಜಲ, ನುಡಿಗಾಗಿ ಸೇವೆ ಸಲ್ಲಿಸಿದ ನನ್ನಂತಹ ಹಿರಿಯರನ್ನು ಪರಿಗಣಿಸಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.