ADVERTISEMENT

ಅಪ್ಪನ ಕನಸು ನನಸಾಗಿಸಿದ ಡಾ.ಎನ್.ವಿವೇಕ್ ರೆಡ್ಡಿ

ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 14:21 IST
Last Updated 4 ಆಗಸ್ಟ್ 2020, 14:21 IST
ಡಾ.ಎನ್.ವಿವೇಕರೆಡ್ಡಿ
ಡಾ.ಎನ್.ವಿವೇಕರೆಡ್ಡಿ   

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಕನಂಪಲ್ಲಿಯ ನಿವಾಸಿ ಡಾ.ಎನ್.ವಿವೇಕ್ ರೆಡ್ಡಿ ಅವರು 2019ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್‌ಸಿ) 485ನೇ ರ್‍ಯಾಂಕ್ ಪಡೆದು, ಮೂರನೇ ಪ್ರಯತ್ನದಲ್ಲಿ ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ.

ವೈದ್ಯಕೀಯ ಶಿಕ್ಷಣ ಪದವೀಧರರಾಗಿರುವ ವಿವೇಕ್‌ ರೆಡ್ಡಿ ಅವರು ಶಿಕ್ಷಕರಾಗಿರುವ ತಂದೆಯೇ ತಮ್ಮ ಐಎಎಸ್‌ ಕನಸಿಗೆ ನೀರೇರೆದವರು ಎಂದು ಸ್ಮರಿಸಿಕೊಂಡರು.

ಐಎಎಸ್‌ ತರಬೇತಿಗಾಗಿ ದೆಹಲಿಗೆ ಹೋಗಿ ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ 8 ತಿಂಗಳಿಗೆ ವಾಪಾಸಾಗಿ ಬೆಂಗಳೂರಿನಲ್ಲೇ ಓದಿ, ಪರೀಕ್ಷೆ ಎದುರಿಸಿ ಯಶಸ್ಸು ಪಡೆದವರು ವಿವೇಕ್‌.

ADVERTISEMENT

ಈ ಹಿಂದೆ ಮಂಡ್ಯ ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ಕೆಲಸ ಮಾಡಿರುವ ಇವರು, ಕಳೆದ 10 ತಿಂಗಳಿಂದ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಕಿರಿಯ ನಿವಾಸಿ ವೈಧ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

‘ಯಾವುದೇ ಪರೀಕ್ಷೆ ಕಠಿಣವಲ್ಲ. ತಾಳ್ಮೆ ಇಟ್ಟುಕೊಂಡು ಸತತ ಪ್ರಯತ್ನಪಟ್ಟರೆ ಖಂಡಿತ ಯಶಸ್ಸು ದೊರೆಯುತ್ತದೆ’ ಎನ್ನುವುದು ವಿವೇಕ್ ಅವರ ಅನುಭವದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.