
ಚಿಕ್ಕಬಳ್ಳಾಪುರ: ಸುಮಾರು 90ಕ್ಕೂ ಹೆಚ್ಚು ದೇಶ ಸುತ್ತಿದ್ದೇನೆ. ಅವುಗಳಲ್ಲಿನ ಮುಂದುವರಿದ ದೇಶಗಳಲ್ಲಿ ಅಲ್ಲಿನ ಜನ ಕಾನೂನನ್ನು ಪಾಲಿಸುತ್ತಾರೆ. ಸಾಮಾಜಿಕ ಶಿಸ್ತನ್ನು ರೂಢಿಸಿಕೊಂಡಿರುತ್ತಾರೆ. ನಮ್ಮೆಲ್ಲರ ಒಳಿತಿಗಾಗಿ ಸಮಾಜ ಮಾಡಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದೇ ನಿಜವಾದ ಶಿಸ್ತು. ಶಿಸ್ತನ್ನು ನಾವು ಕಲಿಯದಿದ್ದರೆ ನಮ್ಮ ದೇಶ ಉದ್ಧಾರ ಆಗಲ್ಲ ಎಂದು ನಾರಾಯಣಮೂರ್ತಿ ಹೇಳಿದರು.
ನಾಯಕನಾದವನು ತನ್ನ ತಂಡದ ಆಕಾಂಕ್ಷೆ, ಆತ್ಮವಿಶ್ವಾಸ, ನಂಬಿಕೆ ಮತ್ತು ಭರವಸೆ ಹೆಚ್ಚಿಸಬೇಕು. ತಾನು ಮೌಲ್ಯಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಂತಿರಬೇಕು. ಇಲ್ಲಿ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಲಿಸುತ್ತೇವೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಕ್ಕಳು ವಿಮರ್ಶಿಸುವಂತೆ, ಪ್ರಶ್ನಿಸುವಂತೆ ಪ್ರಾಯೋಗಿಕವಾಗಿ ಪಠ್ಯ ಕಲಿಸುತ್ತಾರೆ. ನಮ್ಮಲ್ಲಿ ಮನನ ಮಾಡಿದರೆ ಅವರು ಪ್ರತಿಯೊಂದನ್ನೂ ತಮ್ಮ ಸುತ್ತಲಿನ ಪ್ರಕೃತಿಯೊಂದಿಗೆ ಸಮೀಕರಿಸಿ ಕಲಿಯುವರು. ತಮ್ಮ ಅವಗಾಹನೆಗೆ ಬರುವ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.