ಮಂಚೇನಹಳ್ಳಿ: ತಾಲ್ಲೂಕಿನ ಕನಗಾನಕೊಪ್ಪದಲ್ಲಿ ನಡೆದ ಗುಂಡಿನ ದಾಳಿ ರಾಜಕೀಯಕ್ಕೆ ತಿರುಗಿದೆ. ಘಟನೆಗೆ ಸಂಬಂಧಿಸಿದಂತೆ ಸಂಸದ ಡಾ. ಕೆ.ಸುಧಾಕರ್ ಹೇಳಿಕೆಯ ವಿಡಿಯೊ ಹರಿದಾಡುತ್ತಿದೆ.
ಇದಕ್ಕೆ ಪ್ರತಿಯಾಗಿ ಶಾಸಕರ ಬೆಂಬಲಿಗರು, ಈ ಗಣಿಯು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರ ಪತ್ನಿಗೆ ಸೇರಿದೆ ಎನ್ನುವ ಪೋಸ್ಟರ್‌ಗಳನ್ನು ಹರಿಬಿಟ್ಟಿದ್ದಾರೆ.
ಈ ಪೋಸ್ಟರ್‌ನಲ್ಲಿ ‘ಮಾನ್ಯ ಬಿಜೆಪಿ ಸಂಸದರೇ ಮಾನ್ಯ ಮಾಜಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಅವರ ಮಂಚೇನಹಳ್ಳಿ ಕ್ರಷರ್‌ಗೆ ಅನುಮತಿ ಕೊಟ್ಟಿದ್ದು ತಾವೇ. 2021ರಲ್ಲಿ ತಾವೇ ಅನುಮತಿ ಕೊಟ್ಟು ಮಂಚೇನಹಳ್ಳಿ ಜನರಿಗೆ ದ್ರೋಹ ಮಾಡಿದ್ದೀರಿ’ ಎಂದಿದೆ.
ಅನುಮತಿ ಪತ್ರ, ಗುಂಡಿನ ದಾಳಿ ನಡೆಸಿದ ಸಕಲೇಶ್, ವೈ.ಎ.ನಾರಾಯಣಸ್ವಾಮಿ ಮತ್ತು ಡಾ.ಕೆ.ಸುಧಾಕರ್ ಜೊತೆ ಇರುವ ಚಿತ್ರಗಳು ಇದರಲ್ಲಿವೆ.
ಕ್ರಷರ್ ಮಾಲೀಕರು ಬಿಜೆಪಿಯವರು, ಇಂದು ಗುಂಡು ಹಾರಿಸಿದ ವ್ಯಕ್ತಿ ಕೂಡ ಬಿಜೆಪಿಯವರು. ಕ್ರಷರ್‌ಗೆ ಅನುಮತಿ ಕೊಟ್ಟವರು ಬಿಜೆಪಿಯವರು ಎಂದು ನಮೂದಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.