ADVERTISEMENT

ರಾಕೇಶ್ ಟಿಕಾಯತ್ ಸ್ವಾಗತಿಸಲು ಹೊರಟ ಜಿಲ್ಲೆಯ ರೈತರು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 15:39 IST
Last Updated 19 ಮಾರ್ಚ್ 2021, 15:39 IST
ರೈತ ಮಹಾಪಂಚಾಯತ್‌ನಲ್ಲಿ ಭಾಗಿಯಾಗಲು ಹೊರಟ ರೈತ ಸಂಘದ ಕಾರ್ಯಕರ್ತರು
ರೈತ ಮಹಾಪಂಚಾಯತ್‌ನಲ್ಲಿ ಭಾಗಿಯಾಗಲು ಹೊರಟ ರೈತ ಸಂಘದ ಕಾರ್ಯಕರ್ತರು   

ಚಿಕ್ಕಬಳ್ಳಾಪುರ: ಶಿವಮೊಗ್ಗ ಮತ್ತು ಹಾವೇರಿಯಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್‌ನಲ್ಲಿ ಪಾಲ್ಗೊಳ್ಳಲು ಬರುತ್ತಿರುವ ರೈತ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್ ಹಾಗೂ ಯದುವೀರ್ ಸಿಂಗ್ ಅವರನ್ನು ಸ್ವಾಗತಿಸಲು ಜಿಲ್ಲೆಯಿಂದ ರೈತರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಸಂಜೆ ತೆರಳಿದರು.

’ರಾತ್ರಿ ವಿಮಾನ ನಿಲ್ದಾಣಕ್ಕೆ ಬರುವ ಅವರನ್ನು ರೈತ ಸಂಘದ ನಾಯಕರು ಹಸಿರು ಶಾಲು ಹೊದಿಸಿ ಸ್ವಾಗತಿಸುವರು. ನಂತರ ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾವೂ ಅವರ ಜತೆ ಉಳಿದುಕೊಳ್ಳಲಿದ್ದೇವೆ‘ ಎಂದು ರೈತ ಸಂಘದ ಪ್ರತೀಶ್ ಹೇಳಿದರು.

20ರಂದು ಬೆಳಿಗ್ಗೆ 7ಕ್ಕೆ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಸಭೆ ನಡೆಯಲಿದೆ. ಅದನ್ನು ಮುಗಿಸಿ ಶಿವಮೊಗ್ಗಕ್ಕೆ ತರಳುತ್ತೇವೆ. ಅಲ್ಲಿನ ಕಾರ್ಯಕ್ರಮ ಮುಗಿಸಿ 21ರಂದು ಹಾವೇರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇವೆ. 22ರಂದು ನಡೆಯುವ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಪೂರ್ಣವಾದ ನಂತರ ಜಿಲ್ಲೆಗೆ ಮರಳುತ್ತೇವೆ ಎಂದರು.

ADVERTISEMENT

ಜಿಲ್ಲೆಯಿಂದ 100ಕ್ಕೂ ಹೆಚ್ಚು ರೈತ ಸಂಘದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.

ಬೆಳ್ಳೂಟ್ಟಿ ಕೆಂಪಣ್ಣ, ಚಿಂತಾಮಣಿ ಕದಿರೇಗೌಡ, ಭೀಮಣ್ಣ, ದೊಡ್ಡತೆಕಳ್ಳಿ ಆಂಜನಪ್ಪ, ಗೌರಿಬಿದನೂರು ಲೋಕೇಶ್ ಗೌಡ, ಎಂ.ಆರ್.ಲಕ್ಷ್ಮಿನಾರಾಯಣ್, ಎರಹಳ್ಳಿ ಆನಂದರೆಡ್ಡಿ, ಚೇತನ್ ಕುಮಾರ್, ಮಣಿಕಂಠ, ಮುನೇಗೌಡ ಇದ್ದರು. ಶಿಡ್ಲಘಟ್ಟದಲ್ಲಿ ಒಂದೆಡೆ ಸೇರಿದ ಕಾರ್ಯಕರ್ತರು ನಂತರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.