ADVERTISEMENT

ಜಿಲ್ಲೆಯಲ್ಲೂ ಊಟ ವಿತರಿಸಲು ಸಿದ್ಧ

ಇಸ್ಕಾನ್ ಫೌಂಡೇಷನ್ ವತಿಯಿಂದ ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಊಟದ ತಟ್ಟೆಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 10:51 IST
Last Updated 3 ಜನವರಿ 2020, 10:51 IST
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಇಸ್ಕಾನ್ ಫೌಂಡೇಷನ್ ಮುಖ್ಯಸ್ಥ ಗುಣಕರ ರಾಮದಾಸ ಪ್ರಭು ಅವರು ಊಟದ ತಟ್ಟೆಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಇಸ್ಕಾನ್ ಫೌಂಡೇಷನ್ ಮುಖ್ಯಸ್ಥ ಗುಣಕರ ರಾಮದಾಸ ಪ್ರಭು ಅವರು ಊಟದ ತಟ್ಟೆಗಳನ್ನು ವಿತರಿಸಿದರು.   

ಚಿಕ್ಕಬಳ್ಳಾಪುರ: ‘ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ಇಸ್ಕಾನ್ ವತಿಯಿಂದ ಮಂಡಿಕಲ್ಲು ಮತ್ತು ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ನೀಡಲು ಸಿದ್ಧ’ ಎಂದು ಇಸ್ಕಾನ್ ಫೌಂಡೇಷನ್ ಮುಖ್ಯಸ್ಥ ಗುಣಕರ ರಾಮದಾಸ ಪ್ರಭು ಹೇಳಿದರು.

ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಊಟದ ತಟ್ಟೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಕ್ಕಳು ಯಾವುದೇ ಕಾರಣಕ್ಕೂ ಹಸಿದು ಶಾಲೆಗೆ ಬಂದು ಶಿಕ್ಷಣ ಪಡೆಯಬಾರದು ಎಂಬ ಉದ್ದೇಶದಿಂದ ನಮ್ಮ ಸಂಸ್ಥೆಯು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ವಿತರಿಸುತ್ತಿದೆ. ಇಲಾಖೆ ಅನುಮತಿ ನೀಡಿದರೆ ಆ ಸೇವೆಯನ್ನು ಈ ಜಿಲ್ಲೆಗೂ ವಿಸ್ತರಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ತಿಳಿಸಿದರು.

ಸಂಸ್ಥೆ ಪದಾಧಿಕಾರಿಗಳಾದ ಸುಬ್ರಮಣ್ಯಂ, ಅಜಿತ್, ಪ್ರೇಮಜಿತ್, ರಮೇಶ್, ಪ್ರಾಂಶುಪಾಲೆ ಗೀತಾ, ಉಪಪ್ರಾಂಶುಪಾಲ ಎ.ಎಚ್.ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕ ಪಿ.ಸುನೀಲ್, ಮುಖ್ಯ ಶಿಕ್ಷಕ ಅಶ್ವತ್ಥನಾರಾಯಣ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.