ADVERTISEMENT

ಶಿಡ್ಲಘಟ್ಟ: ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಬಿ.ಎನ್.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 5:38 IST
Last Updated 10 ಜನವರಿ 2026, 5:38 IST
<div class="paragraphs"><p>ಶಿಡ್ಲಘಟ್ಟ ತಾಲ್ಲೂಕು ನಾರಾಯಣದಾಸರಹಳ್ಳಿಗೆ ಸಂಪರ್ಕ ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಗ್ರಾಮಸ್ಥರ ಜತೆಗೂಡಿ ಶಾಸಕ ಬಿ.ಎನ್.ರವಿಕುಮಾರ್ ವೀಕ್ಷಿಸಿದರು</p></div>

ಶಿಡ್ಲಘಟ್ಟ ತಾಲ್ಲೂಕು ನಾರಾಯಣದಾಸರಹಳ್ಳಿಗೆ ಸಂಪರ್ಕ ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಗ್ರಾಮಸ್ಥರ ಜತೆಗೂಡಿ ಶಾಸಕ ಬಿ.ಎನ್.ರವಿಕುಮಾರ್ ವೀಕ್ಷಿಸಿದರು

   

ಶಿಡ್ಲಘಟ್ಟ: ಗ್ರಾಮಸ್ಥರ ಬಹಳ ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲೆ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಶಿಡ್ಲಘಟ್ಟ-ಚೀಮಂಗಲ ಮುಖ್ಯರಸ್ತೆಯಿಂದ ನಾರಾಯಣದಾಸರಹಳ್ಳಿ ಗ್ರಾಮಕ್ಕೆ ₹70 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ, ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ ಮಾತನಾಡಿದರು.

ADVERTISEMENT

ಶಿಡ್ಲಘಟ್ಟ-ಚೀಮಂಗಲ ಮುಖ್ಯರಸ್ತೆಯಿಂದ ನಾರಾಯಣದಾಸರಹಳ್ಳಿವರೆಗೆ ಸಂಪರ್ಕಿಸುವ ರಸ್ತೆ ಬಹಳಷ್ಟು ವರ್ಷಗಳ ಹಿಂದೆ ಡಾಂಬರು ಹಾಕಿದ್ದು ರಸ್ತೆ ಹಾಳಾಗಿ ಸಂಚಾರಕ್ಕೆ ತೊಡಕಾಗಿತ್ತು. ಹಾಗಾಗಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಪಡಿಸಿ ಡಾಂಬರೀಕರಣ ಮಾಡಲು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ, ಅಗಲೀಕರಣ ಮತ್ತು ಡಾಂಬರೀಕರಣಕ್ಕಾಗಿ ₹70 ಲಕ್ಷ ಮಂಜೂರು ಮಾಡಿಸಿದ್ದು ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯನ್ನು ಗುಣಮಟ್ಟ ಕಾಪಾಡಿಕೊಂಡು ನಿಗದಿತ ಸಮಯದೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದರು.

‘ನಿಮ್ಮೂರಿಗೆ ಸಂಪರ್ಕಿಸುವ ರಸ್ತೆ ಕಾಮಗಾರಿಯಾಗಿದ್ದು ಕಾಮಗಾರಿಯನ್ನು ನಿಮ್ಮ, ನಮ್ಮ ತೆರಿಗೆ ಹಣದಿಂದ ಮಾಡಲಾಗುತ್ತಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಗಮನಿಸಬೇಕು. ಗುಣಮಟ್ಟದಲ್ಲಿ ಏನಾದರೂ ಹೆಚ್ಚು ಕಡಿಮೆ ಕಂಡು ಬಂದರೆ ಗಮನಕ್ಕೆ ತನ್ನಿ’ ಎಂದರು.

ಗ್ರಾಮಸ್ಥರೊಂದಿಗೆ ಗ್ರಾಮದ ಅಭಿವೃದ್ಧಿ, ಕೈಗೊಳ್ಳಬೇಕಾದ ಮೂಲ ಸೌಕರ್ಯಗಳು ಮತ್ತು ಕೈಗೊಂಡ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಮುಖಂಡ ತಾದೂರು ರಘು, ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.