ADVERTISEMENT

ಶಿಡ್ಲಘಟ್ಟ: ಕೋಡಿ ಹರಿದ ಸಾದಲಿ ಕೆರೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 6:57 IST
Last Updated 27 ಅಕ್ಟೋಬರ್ 2025, 6:57 IST
<div class="paragraphs"><p>ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೊಸಕೆರೆ ತುಂಬಿ ರಸ್ತೆ ಮೇಲೆ ನೀರು ಹರಿಯಿತು</p></div>

ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೊಸಕೆರೆ ತುಂಬಿ ರಸ್ತೆ ಮೇಲೆ ನೀರು ಹರಿಯಿತು

   

ಶಿಡ್ಲಘಟ್ಟ: ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಸಾದಲಿ ಹೊಸಕೆರೆ ತುಂಬಿ ಹರಿಯುತ್ತಿದೆ.

ಉತ್ತರ ಪೆನ್ನಾರ್ ನದಿ ಕಣಿವೆ ಪ್ರದೇಶದಲ್ಲಿರುವ ಸಾದಲಿ ಹೊಸಕೆರೆ ಅಚ್ಚುಕಟ್ಟು 45 ಹೆಕ್ಟೇರ್‌ಗಳಷ್ಟಿದೆ. ಈ ಕೆರೆಯ ನೀರಿನ ಶೇಖರಣೆ ಪ್ರದೇಶ 4.21 ಹೆಕ್ಟೇರ್‌ಗಳಷ್ಟಿದೆ.

ADVERTISEMENT

ತಾಲ್ಲೂಕಿನ ಸಾದಲಿ ಮತ್ತು ಎಸ್.ದೇವಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಹಲವು ಕೆರೆಗಳು ತುಂಬಿದ್ದು ಈ ಭಾಗದ ಜನರ ಹರ್ಷಕ್ಕೆ ಕಾರಣವಾಗಿದೆ. ಎಸ್.ದೇವಗಾನಹಳ್ಳಿ ಪಂಚಾಯಿತಿಯ ಇರಗಪ್ಪನಹಳ್ಳಿ ಕೆರೆಯೂ ತುಂಬಿದೆ. ಈ ಭಾಗದ ಅಕ್ಕಯ್ಯಗಾರು ಕೆರೆ ಮತ್ತು ಎಸ್.ಗೊಲ್ಲಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದು ಸಾದಲಿ ಹೊಸಕೆರೆಗೆ ನೀರು ಹರಿದು ಬಂದು ಈಗ ಈ ಕೆರೆಯೂ ತುಂಬಿ ಕೋಡಿ ಹರಿದಿದೆ. ಹರಿಯುತ್ತಿರುವ ನೀರಿನಲ್ಲಿ ಕೊಡಮೆ ಹಾಕಿ ಯುವಕರು ಮೀನು ಹಿಡಿಯುವ ದೃಶ್ಯ ಕಾಣುತ್ತಿತ್ತು. ರಸ್ತೆಯ ಮೇಲೆ ಹರಿದು ಹೋಗುವ ನೀರಿನಲ್ಲಿ ಮಕ್ಕಳು ಆಟ ಆಡುತ್ತಿದ್ದರು.

ಸಾದಲಿ ಹೊಸಕೆರೆ ತುಂಬಿ ಹರಿಯುವ ನೀರು ಸಾದಲಿ ಸಾದಲಮ್ಮನ ಕೆರೆಗೆ ಹರಿಯುತ್ತದೆ. ಅಲ್ಲಿಂದ ಮುಂದೆ ರಾಮಸಮುದ್ರ ಕೆರೆಯ ಕಡೆಗೆ ನೀರು ಹರಿದು ಹೋಗುತ್ತದೆ. ಈಗ ರಾಮಸಮುದ್ರದ ಕೆರೆಯೂ ತುಂಬಿ ಹರಿಯುತ್ತಿದೆ.