ADVERTISEMENT

ಶಿಡ್ಲಘಟ್ಟ: 85 ಲಕ್ಷ ಮಂದಿ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 2:46 IST
Last Updated 15 ಜುಲೈ 2025, 2:46 IST
‘ಶಕ್ತಿ’ ಯೋಜನೆ ಸಂಭ್ರಮಾಚರಣೆ ಪ್ರಯುಕ್ತ ಶಿಡ್ಲಘಟ್ಟದ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್‌ಗೆ ಪೂಜೆ ಸಲ್ಲಿಸಲಾಯತು
‘ಶಕ್ತಿ’ ಯೋಜನೆ ಸಂಭ್ರಮಾಚರಣೆ ಪ್ರಯುಕ್ತ ಶಿಡ್ಲಘಟ್ಟದ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್‌ಗೆ ಪೂಜೆ ಸಲ್ಲಿಸಲಾಯತು   

ಶಿಡ್ಲಘಟ್ಟ: ಶಕ್ತಿ ಯೋಜನೆ ಆರಂಭವಾದ ಎರಡು ವರ್ಷದಲ್ಲಿ ತಾಲ್ಲೂಕಿನಲ್ಲಿ 85,90,102 ಮಹಿಳೆಯರು ಪ್ರಯಾಣಿಸಿದ್ದು, ₹30,71,48,142 ಮೊತ್ತದ ಟಿಕೆಟ್‌ ವಿತರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಟಿ.ವಿ.ನಾಗೇಶ್ ತಿಳಿಸಿದರು.

ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆಯ ಎರಡು ವರ್ಷ ಪೂರೈಸಿರುವ ಸಂಭ್ರಮಾಚರಣೆ ಪ್ರಯುಕ್ತ ಬಸ್‌ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಅವರು ಮಾತನಾಡಿದರು.

ಯೋಜನೆ ಆರಂಭವಾದ ಎರಡು ವರ್ಷದ ಅವಧಿಯಲ್ಲಿ ವಿದ್ಯಾರ್ಥಿನಿಯರು, ಉದ್ಯೋಗಕ್ಕೆ ಹೋಗುವ ಹೆಣ್ಣುಮಕ್ಕಳು ಹಾಗೂ ಮಹಿಳೆಯರು ‘ಶಕ್ತಿ’ ಯೋಜನೆ ಪ್ರಯೋಜನೆ ಪಡೆದುಕೊಂಡಿದ್ದಾರೆ. ಇದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದದು, ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ADVERTISEMENT

ಘಟಕ ಉಸ್ತುವಾರಿ ಅಧಿಕಾರಿ ಜೆ.ವಿ.ಶ್ರೀಧರ್, ಬಸ್ ನಿಲ್ದಾಣಾಧಿಕಾರಿ ಬಿ.ವಿ.ಚಲಪತಿ, ಘಟಕದ ಸಂಚಾರಿ ನಿರೀಕ್ಷಕ ಪರಮೇಶ್ವರ ಸಿಂಘಿ , ಗಣಕ ಮೇಲ್ವಿಚಾರಕ ಪಿ.ಎಂ. ನಾರಾಯಣಸ್ವಾಮಿ, ಸಿಬ್ಬಂದಿ ಬಾಬಾ, ಅರುಣ , ವಸಂತ್ ಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.