ADVERTISEMENT

ಶಿಡ್ಲಘಟ್ಟ: ಗೋಡಂಬಿ ತೋಟಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 15:15 IST
Last Updated 27 ಮಾರ್ಚ್ 2024, 15:15 IST
ಶಿಡ್ಲಘಟ್ಟ ತಾಲ್ಲೂಕಿನ ಇದ್ಲೂಡು ಗ್ರಾಮದ ವೇಣು ಅವರ ಗೋಡಂಬಿ ತೋಟಕ್ಕೆ ಬೆಂಕಿ ಬಿದ್ದಿದೆ
ಶಿಡ್ಲಘಟ್ಟ ತಾಲ್ಲೂಕಿನ ಇದ್ಲೂಡು ಗ್ರಾಮದ ವೇಣು ಅವರ ಗೋಡಂಬಿ ತೋಟಕ್ಕೆ ಬೆಂಕಿ ಬಿದ್ದಿದೆ   

ಶಿಡ್ಲಘಟ್ಟ: ತಾಲ್ಲೂಕಿನ ಇದ್ಲೂಡು ಗ್ರಾಮದ ವೇಣು ಅವರಿಗೆ ಸೇರಿರುವ ಗೋಡಂಬಿ ತೋಟಕ್ಕೆ ಸೋಮವಾರ ಬೆಂಕಿ ತಗುಲಿ ಒಂದು ಎಕರೆ ತೋಟ ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿಗಳಷ್ಟು ನಷ್ಟವಾಗಿದೆ.

ವೇಣು ಅವರು ಮೂರು ಎಕರೆಯಲ್ಲಿ ಗೋಂಡಬಿ ಬೆಳೆದಿದ್ದು, ಅದರಲ್ಲಿ ಒಂದು ಎಕರೆ ಬೆಂಕಿಗೆ ಆಹುತಿ ಆಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿತು.

ಘಟನೆ ಆಕಸ್ಮಿಕವೋ , ಕಿಡಿಗೇಡಿಗಳ ಕೃತ್ಯವೋ ಎಂಬುದು ತಿಳಿದು ಬಂದಿಲ್ಲ. ಬೇಸಿಗೆ ಆರಂಭದ ಬಳಿಕ ತಾಲ್ಲೂಕಿನ ಹಲವು ಕಡೆ ಈ ರೀತಿಯ ಅವಘಡಗಳು ನಡೆಯುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.