
ಶಿಡ್ಲಘಟ್ಟ: ನಗರ ಹೃದಯ ಭಾಗದ ಕೋಟೆ ವೃತ್ತದಲ್ಲಿನ ಸೋಮೇಶ್ವರ ದೇವಾಲಯದ ಜೀರ್ಣೋದ್ಧಾರ, ವಿಮಾನ ಗೋಪುರದ ಮಹಾ ಸಂಪ್ರೋಕ್ಷಣೆಯ ಪ್ರತಿಷ್ಟಾಪನಾ ಕೈಂಕರ್ಯಗಳು ಶನಿವಾರದಿಂದ ಮೂರು ದಿನ ಶ್ರದ್ಧಾಭಕ್ತಿಯಿಂದ ನೆರವೇರಿದವು.
ಶನಿವಾರ ಪ್ರಾರಂಭವಾದ ಪೂಜಾ ಕೈಂಕರ್ಯಗಳು ಸೋಮವಾರದವರೆಗೆ ನಡೆದವು. ಶನಿವಾರ ಗಣೇಶಪೂಜೆ, ಕಂಕಣಬಂಧನ, ಸ್ವಸ್ತಿ ಪುಣ್ಯಾಹ, ದೇವನಾಂದಿ ಕಲಶ ಪ್ರತಿಷ್ಟಾಪನೆ ನಡೆಯಿತು.
ಭಾನುವಾರ ಅಧಿವಾಸ ಹೋಮ, ತತ್ವ ಹವನಂ, ಕಲಾ-ನಿದರ್ಶನ, ನವಗ್ರಹಹವನಂ, ಗಣೇಶ ಹವನಂ ಇತ್ಯಾದಿ ನಡೆಯಿತು.
ಸೋಮವಾರ ಸರ್ವದೇವರಿಗೆ ಮಹಾಭಿಷೇಕ ಸೇರಿದಂತೆ ಇನ್ನಿತರ ಧಾರ್ಮಿಕ ಚಟುವಟಿಕೆಗಳು ನಡೆದವು.
ಸಂಸದ ಮಲ್ಲೇಶಬಾಬು.ಎಂ, ಶಾಸಕ ಬಿ.ಎನ್.ರವಿಕುಮಾರ್, ಕಾಂಗ್ರೆಸ್‌ನ ಡಾ.ಎಂ.ಶಶಿದರ್, ಆಂಜಿನಪ್ಪ (ಪುಟ್ಟು), ಬಿ.ವಿ.ರಾಜೀವ್‌ಗೌಡ, ತಹಶೀಲ್ದಾರ್ ಗಗನ ಸಿಂಧೂ, ಸೋಮೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ನಾಗರಾಜ್ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.