ಚಿಂತಾಮಣಿ: ಜೀವಾತ್ಮದಲ್ಲಿ ಪರಮಾತ್ಮ ಇರುವಾಗ ಒಳ್ಳೆಯ ಮನಸ್ಸು, ಸಂಸ್ಕಾರ, ಬುದ್ಧಿ ಬೆಳೆಸಿಕೊಂಡು ಜೀವನದಲ್ಲಿ ಧರ್ಮ ಮಾರ್ಗದ ಮೂಲಕ ಸಾಧನೆ ಮಾಡಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ .ಕೆ ಸರೋಜ ಹೇಳಿದರು.
ಕೈವಾರದ ಯೋಗಿ ನಾರೇಯಣ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಮಾರ್ಗ ಎಂದರೆ ಈಶ್ವರನ ಮಾರ್ಗದಲ್ಲಿ ನಡೆದಾಗ ನಮಗೆ ಆತ್ಮ ಉನ್ನತಿ ಮತ್ತು ಜೀವನ್ಮುಕ್ತಿ ದೊರಕುತ್ತದೆ. ಆತ್ಮ ತನ್ನ ಕರ್ಮವನ್ನು ಕಳೆದುಕೊಳ್ಳಲು ಬೇರೆ ಬೇರೆ ದೇಹದೊಳಗೆ ಸೇರಿಕೊಂಡು ತನ್ನ ಸಾಲ ಅಂದರೆ ಕರ್ಮವನ್ನು ತೀರಿಸುತ್ತದೆ. ನಮ್ಮ ಇಂದ್ರಿಯಗಳು ನಮ್ಮನ್ನೇ ಕಟ್ಟಿ ಹಾಕುತ್ತವೆ. ಯಾರು ಇಂದ್ರಿಯಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೋ ಅವರೇ ನಿಜವಾದ ಸಾಧಕರು ಎಂದರು.
ಶಿಕ್ಷಕ ಶ್ರೀಧರ ಹಿರೇಮಠ್, ರಮಾದೇವಿ, ಆನಂದ ಬಾಬು, ಅಮೃತೇಶ್, ವಾಸವಿ ಮಹಿಳಾ ಸಮಾಜದ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.