ADVERTISEMENT

ವಿದ್ಯಾರ್ಥಿನಿಗೆ ಶಿಕ್ಷಕನ ಬ್ಯಾಡ್ ಟಚ್: ಮಕ್ಕಳ ಸಹಾಯವಾಣಿಗೆ ದೂರು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 5:55 IST
Last Updated 14 ಫೆಬ್ರುವರಿ 2026, 5:55 IST
Venugopala K.
   Venugopala K.

ಶಿಡ್ಲಘಟ್ಟ: ‘ನನ್ನ ಕೆಟ್ಟದಾಗಿ ಸ್ಪರ್ಶಿಸಿ (ಬ್ಯಾಡ್ ಟಚ್) ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಶಿಕ್ಷಕರೊಬ್ಬರ ವಿರುದ್ಧ ತಾಲ್ಲೂಕಿನ ಶಾಲೆಯೊಂದರ ವಿದ್ಯಾರ್ಥಿನಿ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಾರೆ. 

ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಶಿಕ್ಷಕರೊಬ್ಬರಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ. 

ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಶಾಲೆಯ ದೂರು ಪೆಟ್ಟಿಗೆ ಪರಿಶೀಲಿಸಿದ್ದಾರೆ. 9 ವಿದ್ಯಾರ್ಥಿನಿಯರು ಶಿಕ್ಷಕನ ಬ್ಯಾಡ್ ಟಚ್ ವಿರುದ್ಧ ಪತ್ರ ಬರೆದು ಹಾಕಿದ್ದಾರೆ, ಅವೆಲ್ಲವನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ADVERTISEMENT

9 ವಿದ್ಯಾರ್ಥಿನಿಯರು ಕೂಡ ಶಿಕ್ಷಕನ ವಿರುದ್ಧ ಬ್ಯಾಡ್ ಟಚ್ ಆರೋಪ ಮಾಡಿರುವುದಾಗಿ ತಿಳಿದು ಬಂದಿದೆ. ಆದರೆ ಪೋಷಕರು ದೂರು ನೀಡಲು ಹಿಂದೇಟು ಹಾಕಿದ್ದು, ‘ಶಿಕ್ಷಕನನ್ನು ಶಾಲೆಗೆ ಕಳುಹಿಸಿದರೆ ಕೈಕಾಲು ಮುರಿದು ಹಾಕುತ್ತೇವೆ. ಮುಂದಿನ ಅನಾಹುತಗಳಿಗೆ ಅಧಿಕಾರಿಗಳೆ ಕಾರಣ’ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಲೆಗೆ ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಸಿಬ್ಬಂದಿಯೊಂದಿಗೆ ಭೇಟಿ ನೀಡಿದ್ದೆವು. ಮಗುವೊಂದರ ಹೇಳಿಕೆಯನ್ನು ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಖಲಿಸಿಕೊಂಡರು. 9 ಮಕ್ಕಳ ವಿಚಾರ ನನಗೆ ಗೊತ್ತಿಲ್ಲ. ಪೋಷಕರು ದೂರು ನೀಡಲು ನಿರಾಕರಿಸಿದರು. ಮಕ್ಕಳ ಹೇಳಿಕೆ ಆಧಾರದಲ್ಲಿ ಮುಂದಿನ ಕ್ರಮವನ್ನು ಸಂಬಂಧಿಸಿದ ಇಲಾಖೆಯವರಿಂದ ಆಗಲಿದೆ ಎಂದು ಶಿಡ್ಲಘಟ್ಟ ಬಿಇಒ ನರೇಂದ್ರ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.