ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ 67 ಕೋವಿಡ್ 19 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 2,511ಕ್ಕೆ ಏರಿಕೆಯಾಗಿದೆ.
ಈವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ 5,0062 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿದ್ದು, ಈ ಪೈಕಿ 46,993 ಮಂದಿ ವರದಿ ನೆಗೆಟಿವ್ ಬಂದಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಪೈಕಿ ಈವರೆಗೆ 43 ಜನರು ಮೃತಪಟ್ಟಿದ್ದು, 1,511 ಜನರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಗಡೆಗೊಂಡಿದ್ದಾರೆ. ಶನಿವಾರ 30 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 957 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ತಾಲ್ಲೂಕುವಾರು ಕೋವಿಡ್ ಪ್ರಕರಣಗಳ ವಿವರ
ತಾಲ್ಲೂಕು | ಆಗಸ್ಟ್ 8 | ಒಟ್ಟು | ಬಿಡುಗಡೆ | ಒಟ್ಟು ಬಿಡುಗಡೆ | ಸಕ್ರಿಯ ಪ್ರಕರಣ | ಸಾವು |
ಚಿಕ್ಕಬಳ್ಳಾಪುರ | 21 | 1,082 | 2 | 521 | 543 | 17 |
ಬಾಗೇಪಲ್ಲಿ | 16 | 279 | 2 | 175 | 99 | 5 |
ಚಿಂತಾಮಣಿ | 14 | 385 | 5 | 255 | 123 | 7 |
ಗೌರಿಬಿದನೂರು | 6 | 461 | 9 | 367 | 84 | 11 |
ಗುಡಿಬಂಡೆ | 4 | 110 | 1 | 80 | 29 | 1 |
ಶಿಡ್ಲಘಟ್ಟ | 6 | 194 | 11 | 113 | 79 | 2 |
ಒಟ್ಟು; | 67 | 2,511 | 30 | 1,511 | 957 | 43 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.