ADVERTISEMENT

ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 2:30 IST
Last Updated 30 ಮಾರ್ಚ್ 2022, 2:30 IST
ಪ್ರತಿಭಟನೆಯಲ್ಲಿ ‌ಭಾಗವಹಿಸಿದ್ದ ಕಾರ್ಮಿಕರು
ಪ್ರತಿಭಟನೆಯಲ್ಲಿ ‌ಭಾಗವಹಿಸಿದ್ದ ಕಾರ್ಮಿಕರು   

ಗೌರಿಬಿದನೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಮಂಗಳವಾರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ. ಸಿದ್ದಗಂಗಪ್ಪ ಮಾತನಾಡಿ, ಪ್ರಸ್ತುತ ದೇಶದಲ್ಲಿನ ಕಾರ್ಮಿಕರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅವರ ಅಳಿವು ಉಳಿವಿಗೆ ಏಳನೇ ವೇತನ ಆಯೋಗವನ್ನು ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಆರ್. ರವಿಚಂದ್ರರೆಡ್ಡಿ, ಮಂಜುನಾಥಚಾರಿ, ಅಂಗನವಾಡಿ ಸಂಘಟನೆಯ ವೆಂಕಟಲಕ್ಷ್ಮಮ್ಮ, ಜಯಮಂಗಲ, ರಾಜಮ್ಮ ನರಸಮ್ಮ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.