ADVERTISEMENT

ಚಿಕ್ಕಮಗಳೂರು: 51 ಮಂದಿಗೆ ಕೋವಿಡ್ ದೃಢ, 166 ಸಕ್ರಿಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 3:19 IST
Last Updated 2 ಏಪ್ರಿಲ್ 2021, 3:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗುರುವಾರ 51 ಮಂದಿಗೆ ಕೋವಿಡ್‌ ದೃಢಪಟ್ಟಿದೆ. 14 ಮಂದಿ ಗುಣಮುಖರಾಗಿದ್ದಾರೆ.

ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ನಂತರ ಪ್ರಕರಣಗಳು ಸಂಖ್ಯೆ ಏರುಗತಿ ಹಾದಿಯಲ್ಲಿದೆ. ಕೋವಿಡ್‌ ಪ್ರಕರಣಗಳ ತಾಲ್ಲುಕುವಾರು ಅಂಕಿಅಂಶ: ತರೀಕೆರೆ–26, ಕಡೂರು–10 ಮೂಡಿಗೆರೆ–8, ಚಿಕ್ಕಮಗಳೂರು–7 ಮಂದಿಗೆ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಗುರುವಾರ ಕೋವಿಡ್‌ ಪರೀಕ್ಷೆಗೆ 2153 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಸಕ್ರಿಯ ಪ್ರಕರಣಗಳು 166 ಇವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

5061 ಮಂದಿಗೆ ಲಸಿಕೆ: 45 ವರ್ಷ ತುಂಬಿದವರಿಗೆ ಕೋವಿಡ್‌ ಲಸಿಕೆ ವಿತರಣೆ ಗುರುವಾರದಿಂದ ಶುರುವಾಗಿದೆ. ಜಿಲ್ಲೆಯಲ್ಲಿ ಮೊದಲ ದಿನ 5061 ಮಂದಿಗೆ ಲಸಿಕೆ ಹಾಕಲಾಗಿದೆ.

ADVERTISEMENT

ಮೂರು ಹಂತದ ಲಸಿಕೆ ಪ್ರಕ್ರಿಯೆ ಮುಗಿದಿದ್ದು, ಈಗ ನಾಲ್ಕು ಹಂತದ ಪ್ರಕ್ರಿಯೆ ಶುರುವಾಗಿದೆ. ಜಿಲ್ಲೆಯಲ್ಲಿ ಎಂಟು ಖಾಸಗಿ ಆಸ್ಪತ್ರೆ ಸಹಿತ 147 ಲಸಿಕೆ ಕೇಂದ್ರಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.