
ಪ್ರಜಾವಾಣಿ ವಾರ್ತೆ
ಬಾಳೆಹೊನ್ನೂರು: ಬೆಂಗಳೂರಿನ ಆರ್.ವಿ. ಭದ್ರಯ್ಯ ಸ್ಟೋರ್ಸ್‌ನ ಆರ್.ಬಿ.ಬಸವರಾಜ್ ಮತ್ತು ಕುಟುಂಬದವರು 32 ಅಡಿ ಉದ್ದದ ಪಂಚಮುಖಿ ರುದ್ರಾಕ್ಷಿ ಮಾಲೆಯನ್ನು ಇಲ್ಲಿನ ರಂಭಾಪುರಿ ಪೀಠಕ್ಕೆ ಶುಕ್ರವಾರ ಅರ್ಪಿಸಿದರು.
ನಂತರ ಮಾತನಾಡಿದ ಆರ್.ಬಿ. ಬಸವರಾಜ್, ‘ಈ ಮಾಲೆ ನಿರ್ಮಾಣಕ್ಕೆ ನೇಪಾಳದಿಂದ ರುದ್ರಾಕ್ಷಿ ತರಿಸಲಾಗಿದೆ. 30 ಜನರ ತಂಡವು 15 ದಿನಗಳ ಕಾಲ ಶ್ರಮಿಸಿದ್ದು, 50,108 ಪಂಚಮುಖಿ ರುದ್ರಾಕ್ಷಿಗಳಿಂದ ಮಾಲೆ ಮಾಡಲಾಗಿದೆ. ಸುಮಾರು 300 ಕೆಜಿ ತೂಕ ಇದೆ. ರುದ್ರಾಕ್ಷಿಯನ್ನು ಪೋಣಿಸಲು 50 ಕೆ.ಜಿ ಹಿತ್ತಾಳೆ ತಂತಿ ಬಳಸಲಾಗಿದ್ದು, ನಡುವೆ 5 ಸಾವಿರ ಕ್ರಿಸ್ಟಲ್ ಬಾಲ್ ಅಳವಡಿಸಲಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.