ADVERTISEMENT

ಆಲ್ದೂರು: ನಿರಂತರ ಮಳೆಗೆ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 4:50 IST
Last Updated 31 ಆಗಸ್ಟ್ 2025, 4:50 IST
<div class="paragraphs"><p>ಆಲ್ದೂರು ಗ್ರಾಮ ಪಂಚಾಯಿತಿಯ ಸಂತೆ ಮೈದಾನದ ಮಳಿಗೆಗಳ ಹಿಂಭಾಗದಲ್ಲಿ ಭೂಮಿ ಕುಸಿದಿರುವುದು</p></div>

ಆಲ್ದೂರು ಗ್ರಾಮ ಪಂಚಾಯಿತಿಯ ಸಂತೆ ಮೈದಾನದ ಮಳಿಗೆಗಳ ಹಿಂಭಾಗದಲ್ಲಿ ಭೂಮಿ ಕುಸಿದಿರುವುದು

   

ಆಲ್ದೂರು: ಹೋಬಳಿ ಸುತ್ತಮುತ್ತ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪಟ್ಟಣದ ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆ ಮೈದಾನದ ಕೋಳಿ ಅಂಗಡಿ ಮಳಿಗೆಗಳ ಹಿಂಭಾಗದಲ್ಲಿ ಭೂಮಿ ಕುಸಿದಿದೆ.

ಅಂಗಡಿ ಮಳಿಗೆಗಳ ಹಿಂಭಾಗದ ಸರ್ಕಾರಿ ಜಾಗದಲ್ಲಿ ಮಣ್ಣು ಕುಸಿದ ಪರಿಣಾಮ ಪಕ್ಕದ ಪಾಳು ಬಿದ್ದಿದ್ದ ಗದ್ದೆಯ ಜಮೀನು ಭೂಮಿಯೊಂದಿಗೆ ಗಿಡಮರಗಳು ಹಲವು ಮೀಟರ್‌ಗಳಷ್ಟು ದೂರ ಕೊಚ್ಚಿಕೊಂಡು ಹೋಗಿದೆ.

ADVERTISEMENT

ಭೂಕುಸಿತವಾಗಿರುವ ಪಕ್ಕದಲ್ಲಿ ರೋಜ್ ಬಡ್ಸ್ ಶಾಲಾ ಪರಿಸರ ಕೂಡ ಇದ್ದು, ಇದೇ ರೀತಿ ನಿರಂತರ ಮಳೆ ಸುರಿದರೆ ಯಾವುದೇ ಸುರಕ್ಷತಾ ತಡೆಗೋಡೆಗಳು ಇಲ್ಲದಿರುವ ಕಾರಣ ಇನ್ನಷ್ಟು ಮಣ್ಣು ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಇನ್ನಷ್ಟು ಮಣ್ಣು ಕುಸಿತವಾದರೆ ಪಂಚಾಯಿತಿ ಅಧೀನದ ಕೋಳಿ ಅಂಗಡಿ ಮಳಿಗೆಗಳಿಗೆ ಕೂಡ ಹಾನಿಯಾಗಲಿದೆ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರಾದ ಎ.ಯು.ಇಬ್ರಾಹಿಂ, ಎ.ಆರ್.ನಾಗರಾಜ್, ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.