ADVERTISEMENT

ಆಲ್ದೂರು: ಪಂಚಾಯಿತಿ ಉಪಾಧ್ಯಕ್ಷರಾಗಿ ಭರತ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:24 IST
Last Updated 14 ಮೇ 2025, 15:24 IST
ಆಲ್ದೂರು ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಭರತ್ ಅವರನ್ನು ಪ್ರಾಣೇಶ್ ಅಭಿನಂದಿಸಿದರು
ಆಲ್ದೂರು ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಭರತ್ ಅವರನ್ನು ಪ್ರಾಣೇಶ್ ಅಭಿನಂದಿಸಿದರು   

ಆಲ್ದೂರು: ಪಂಚಾಯಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಭರತ್ ಎ.ಬಿ. ಅವಿರೋಧವಾಗಿ ಆಯ್ಕೆಯಾದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಚೇತನ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಭರತ್ ಅವರು ಕೊನೆಯ ಹಂತದ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಲ್ಪ ಸಮಯದಲ್ಲಿ ಏನು ಮಾಡಬಹುದು ಎಂದು ಯೋಚಿಸುವುದಕ್ಕಿಂತ ಸೇವೆಯನ್ನು ವಿಭಿನ್ನವಾಗಿ ಹೇಗೆ ಮಾಡಬಹುದು ಎಂದು ಚಿಂತಿಸಿದರೆ ಜನಮಾನಸದಲ್ಲಿ ನಾಯಕನಾಗಿ ಬೆಳೆಯುತ್ತಾರೆ ಎಂದರು.

ADVERTISEMENT

ಪಂಚಾಯಿತಿ ಸದಸ್ಯ ಅಶೋಕ್ ಡಿ.ಬಿ. ಮಾತನಾಡಿ, ಸರ್ಕಾರದ ವತಿಯಿಂದ ಜನಪರ ಯೋಜನೆಗಳು, ವಸತಿ ಸೌಲಭ್ಯಗಳನ್ನು ಒದಗಿಸದೆ ಇರುವುದರಿಂದ ತೀವ್ರ ತೊಂದರೆಯಾಗುತ್ತಿದೆ ‌ಎಂದರು.

ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಿರ್ಗಮಿತ ಉಪಾಧ್ಯಕ್ಷ ಕೌಶಿಕ್, ಸದಸ್ಯರು, ಪಿಡಿಒ ಶಂಶೂನ್ ನಹರ್, ಕಾರ್ಯದರ್ಶಿ ಉಷಾ ಸಿಡಿ, ಬಿಜೆಪಿ ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ಹೋರಾಟ ವೇದಿಕೆ ಅಧ್ಯಕ್ಷ ನವರಾಜು ಎಚ್, ಗೌರವಾಧ್ಯಕ್ಷ ಹೊನ್ನಪ್ಪ, ಅರ್ಚಕ ರಾಘವೇಂದ್ರ ಭಟ್, ಗಾಳಿಗಂಡಿ ಚರ್ಚ್ ಫಾಸ್ಟರ್ ಜಾರ್ಜ್, ಕರ್ರಾರ್ ಮಸೀದಿಯ ಹಜರತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.