ADVERTISEMENT

ಷೇರುದಾರರಿಗೆ ಶೇ 15 ರಷ್ಟು ಲಾಭಾಂಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:46 IST
Last Updated 24 ಸೆಪ್ಟೆಂಬರ್ 2022, 5:46 IST
ಬಾಳೆಹೊನ್ನೂರಿನ ಅಪೂರ್ವ ಸೌಹಾರ್ದ ಸಹಕಾರಿ ನಿಯಮಿತದ 2021-2022ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು  ಸಹಕಾರಿನ ನಿಯಮಿತದ ಅಧ್ಯಕ್ಷ ಕೆ.ಸೋಮಶೇಖರ್ ಉದ್ಘಾಟಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಸುದೀಂದ್ರ ಇದ್ದರು. 
ಬಾಳೆಹೊನ್ನೂರಿನ ಅಪೂರ್ವ ಸೌಹಾರ್ದ ಸಹಕಾರಿ ನಿಯಮಿತದ 2021-2022ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು  ಸಹಕಾರಿನ ನಿಯಮಿತದ ಅಧ್ಯಕ್ಷ ಕೆ.ಸೋಮಶೇಖರ್ ಉದ್ಘಾಟಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಸುದೀಂದ್ರ ಇದ್ದರು.    

ಬಾಳೇಹೊನ್ನೂರು: ಅಪೂರ್ವ ಸೌಹಾರ್ದ ಸಹಕಾರಿ ಸಂಘವು 2021-2022 ನೇ ಸಾಲಿನಲ್ಲಿ ₹31.30 ಲಕ್ಷ ಲಾಭ ಗಳಿಸಿದೆ. ಸಂಘದ ಸರ್ವ ಸದಸ್ಯರ ಸಭೆ ಇಟ್ಟಿಗೆ ಸೀಗೋಡಿನ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಕೆ.ಸೋಮಶೇಖರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಸುದೀಂದ್ರ ಮಾತನಾಡಿದರು. ಷೇರುದಾರರಿಗೆ ಶೇ 15ರಷ್ಟು ಲಾಭಾಂಶ ಘೋಷಿಸಲಾಯಿತು.

ಸಹಕಾರಿ ನಿರ್ದೇಶಕ ಎಂ.ಕೆ.ಗುರುರಾಜ್ ಕಾರಂತ್, ಸುಬ್ರಮಣ್ಯ ಕೆ.ಆರ್.ವಂದಿಸಿದರು. ಸೌಹಾರ್ದ ಪತ್ತಿನ ಉಪಾಧ್ಯಕ್ಷ ಎ.ಎನ್.ಸುಬ್ರಮಣ್ಯ, ನಿರ್ದೇಶಕ ಕೆ.ಶೈಲೇಂದ್ರ ಜೋಯ್ಸ್, ವಿ.ಎಸ್.ಕೃಷ್ಣಯ್ಯ, ಕೆ.ಸಿ.ವೆಂಕಟರಮಣ, ಎನ್.ಶ್ರೀನಾಥ್, ಸಿ.ವಿ.ಸುಬ್ರಮಣ್ಯ, ಎಚ್.ಎಸ್,ಸಂದೇಶ್, ಕೆ.ಅರ್.ಗಣೇಶ್, ಯು.ಎನ್.ಪುಷ್ಪಲತಾ, ಅನುಜ್ನಾ ಕಾರಂತ್, ಕುಮಾರ, ನಂದನ್, ಹಿರಿಯ ಸದಸ್ಯರಾದ ಶ್ರೀಧರ್‌ರಾವ್ ಕೆ, ರಾಮಚಂದ್ರ ಕೆ, ಶಶಿಮೋಹನ, ಲೀಲಾವತಿ ಹಾಗೂ ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.