ADVERTISEMENT

ರೋಗ ಹತೋಟಿಗೆ ಸಮಗ್ರ ಪೋಷಕಾಂಶ;: ಕಳಸದಲ್ಲಿ ಎಲೆಚುಕ್ಕಿ ರೋಗ ನಿರ್ವಹಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 16:29 IST
Last Updated 12 ಅಕ್ಟೋಬರ್ 2022, 16:29 IST
ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘದಲ್ಲಿ ನಡೆದ ಅಡಿಕೆ ಎಲೆಚುಕ್ಕೆ ರೋಗದ ಮಾಹಿತಿ ಶಿಬಿರದಲ್ಲಿ ಬೆಳೆಗಾರ ಬಿ.ಎಲ್. ರಾಮದಾಸ್, ಸಂಘದ ಅಧ್ಯಕ್ಷ ಮಂಜಪ್ಪಯ್ಯ, ತೋಟಗಾರಿಕಾ ಇಲಾಖೆಯ ವೇದಮೂರ್ತಿ, ಜಯದೇವ ಇದ್ದರು
ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘದಲ್ಲಿ ನಡೆದ ಅಡಿಕೆ ಎಲೆಚುಕ್ಕೆ ರೋಗದ ಮಾಹಿತಿ ಶಿಬಿರದಲ್ಲಿ ಬೆಳೆಗಾರ ಬಿ.ಎಲ್. ರಾಮದಾಸ್, ಸಂಘದ ಅಧ್ಯಕ್ಷ ಮಂಜಪ್ಪಯ್ಯ, ತೋಟಗಾರಿಕಾ ಇಲಾಖೆಯ ವೇದಮೂರ್ತಿ, ಜಯದೇವ ಇದ್ದರು   

ಕಳಸ: ಇಲ್ಲಿನ ಕಳಸ ಸಹಕಾರಿ ಸಂಘದ ಸಭಾಂಗಣದಲ್ಲಿ ಬುಧವಾರ ಅಡಿಕೆ ಎಲೆಚುಕ್ಕೆ ರೋಗದ ನಿರ್ವಹಣೆ ಬಗ್ಗೆ ಮಾಹಿತಿ ಶಿಬಿರ ನಡೆಯಿತು.

ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ಶಿಬಿರದಲ್ಲಿ ಮೂಡಿಗೆರೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಗಿರೀಶ್ ಎಲೆಚುಕ್ಕೆ ರೋಗದ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ರೋಗಪೀಡಿತ ಅಡಿಕೆ ಗರಿಗೆ ಔಷಧಿ ಸಿಂಪಡಿಸಬೇಕು. ಇಲ್ಲವೇ ಕತ್ತರಿಸಿ ನಾಶಪಡಿಸಬೇಕು ಎಂದು ತಿಳಿಸಿದರು.

ಮಣ್ಣಿನಲ್ಲಿ ರಸಸಾರ ನಿರ್ವಹಣೆ ಮಾಡಿದರೆ ಬಹಳಷ್ಟು ರೋಗಗಳ ಹತೋಟಿಗೆ ಬರುತ್ತವೆ. ಅದಕ್ಕೆ ಸಮಗ್ರ ಪೋಷಕಾಂಶ ನೀಡಬೇಕು ಎಂದರು.

ADVERTISEMENT

ಬೆಳೆಗಾರ ಬಿ.ಎಲ್.ರಾಮದಾಸ್ ಮಾತನಾಡಿ, ಮಣ್ಣಿನ ಪರೀಕ್ಷೆ ಮಾಡದೆ ಯಾವುದೇ ರೋಗಕ್ಕೆ ಔಷಧ, ಗೊಬ್ಬರದ ಸಲಹೆ ನೀಡುವುದು ತಪ್ಪು ಎಂದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಮಾತನಾಡಿ, ಮರಸಣಿಗೆ ಮತ್ತು ಸಂಸೆ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಕಂಡುಬಂದ ಎಲೆಚುಕ್ಕೆ ರೋಗವು ಫಂಗಸ್‍ನಿಂದ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ಎಲ್ಲ ಬೆಳೆಗಾರರು ಹತೋಟಿ ಕ್ರಮ ಪಾಲಿಸಬೇಕು ಎಂದರು.

ತೋಟಗಾರಿಕಾ ಸಹಾಯಕ ನಿರ್ದೇಶಕ ಜಯದೇವ್, ಸಹಕಾರ ಸಂಘದ ಆಶಾಲತಾ ಜೈನ್, ಸತೀಶ್‍ಚಂದ್ರ, ಸಿಇಒ ಮಹಾಲೇಶ್ವರ್, ಬೆಳೆಗಾರರಾದ ಶೇಷಗಿರಿ, ಜ್ವಾನಯ್ಯ, ಕೇಶವೇಗೌಡ, ಕೆ.ಸಿ.ಧರಣೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.