ADVERTISEMENT

ಕಳಸೇಶ್ವರ ದೇವಸ್ಥಾನದ ಹುಂಡಿ ಒಡೆಯಲು ಯತ್ನಿಸಿದ ಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 13 ಮೇ 2024, 14:19 IST
Last Updated 13 ಮೇ 2024, 14:19 IST
ಕಳಸದ ಕಳಸೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಒಡೆಯಲು ಯತ್ನ ನಡೆಸಿರುವುದು.
ಕಳಸದ ಕಳಸೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಒಡೆಯಲು ಯತ್ನ ನಡೆಸಿರುವುದು.   

ಕಳಸ: ಇಲ್ಲಿನ ಕಳಸೇಶ್ವರ ದೇವಸ್ಥಾನದ ಹುಂಡಿ ಒಡೆಯಲು ಯತ್ನಿಸಿದ ಕಳ್ಳನನ್ನು ದೇವಸ್ಥಾನದ ಕಾವಲುಗಾರರ ನೆರವಿನಿಂದ ಕಳಸ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಬೆಳಗಿನ ಜಾವ 2 ಗಂಟೆ ವೇಳೆಗೆ ದೇವಸ್ಥಾನದ ಆವರಣದ ಹಣ್ಣುಕಾಯಿ ಅಂಗಡಿಗೆ ಕಳ್ಳನೊಬ್ಬ ನುಗ್ಗಿ ಸ್ವಲ್ಪ ಹಣ ಮತ್ತು ಕೆಲ ವಸ್ತುಗಳನ್ನು ದೋಚಿದ್ದಾನೆ. ಆನಂತರ ದೇವಸ್ಥಾನದ ಹುಂಡಿಯನ್ನು ಆತ ಒಡೆಯುವ ಯತ್ನದಲ್ಲಿ ಇದ್ದಾಗ ದೇವಸ್ಥಾನದ ಕಾವಲುಗಾರರು ಕಳ್ಳನನ್ನು ಹಿಡಿದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಠಾಣಾಧಿಕಾರಿ ಭರಮಪ್ಪ ಬೆಳಗಲಿ ನೇತೃತ್ವದಲ್ಲಿ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮದ ಚಂದ್ರಶೇಖರ ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT