ನರಸಿಂಹರಾಜಪುರ: ಪಟ್ಟಣ ವ್ಯಾಪ್ತಿಯ ಪ್ರಮುಖ ರಸ್ತೆಗಳು ಅಲ್ಲಲ್ಲಿ ಹದಗೆಟ್ಟಿದ್ದು, ಪ್ರಯಾಣ ಮಾಡುವುದೇ ಪ್ರಯಾಸವಾಗಿದೆ ಎಂದು ನಾಗರಿಕರು ದೂರಿದ್ದಾರೆ.
ಸುಂಕದಕಟ್ಟೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಮುಂಭಾಗದ ಮುಖ್ಯರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಮಳೆ ಬಂದಾಗ ನೀರು ತುಂಬಿಕೊಳ್ಳುವುದರಿಂದ ರಸ್ತೆ ಯಾವುದು ಗುಂಡಿಯಾವುದು ಗೊತ್ತಾಗುವುದಿಲ್ಲ. ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ತುಂಬ ನೀರು ನಿಲ್ಲುತ್ತದೆ. ಇದೇ ವ್ಯಾಪ್ತಿಯ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ಮೇಲೆ ನೀರು ನಿಲ್ಲುವುದರಿಂದ ಬಸ್‌ಗಾಗಿ ಕಾಯುವವರಿಗೆ, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ ನೀರು ಹಾರುವುದು ಸಾಮಾನ್ಯ ಸಂಗತಿಯಾಗಿದೆ.
ಸುಂಕದಕಟ್ಟೆಯಿಂದಅಗ್ರಹಾರದವರೆಗೆ ನೂತನವಾಗಿ ನಿರ್ಮಿಸಿರುವ ರಸ್ತೆಯ ಮೇಲೆ, ಪುಷ್ಪ ಆಸ್ಪತ್ರೆ ಸಮೀಪದ ಮುಖ್ಯರಸ್ತೆ, ಅಗ್ರಹಾರದ ಬಸ್ ನಿಲ್ದಾಣದ ಮುಂಭಾಗ ನೀರು ಹರಿಯುವ ವ್ಯವಸ್ಥೆಯಿಲ್ಲದಿರುವುದರಿಂದ ಪಾದಚಾರಿಗಳಿಗೆ ಸಂಚರಿಸುವುದು ಕಷ್ಟವಾಗಿದೆ.
ಪಟ್ಟಣದ ಪ್ರಮುಖ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಳೆ ಬಂದಾಗ ನೀರು ಹರಿಯಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ.
ಹಳೆ ಮಂಡಗದ್ದೆ ವೃತ್ತದಿಂದ ಪ್ರವಾಸಿ ಮಂದಿರದವರೆಗಿನ ರಸ್ತೆ ಹದಗೆಟ್ಟಿದ್ದು, ಗುಂಡಿಗಳಲ್ಲಿ ಕೆಸರು ತುಂಬಿಕೊಂಡಿದೆ.
ಹಳೆ ಮಂಡಗದ್ದೆ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ಆಟೊ ಚಾಲನೆ ಮಾಡುವುದು ದುಸ್ತರವಾಗಿದೆ. ಕನಿಷ್ಠ ರಸ್ತೆ ವಿಸ್ತರಣೆ ಆಗುವವರೆಗಾದರೂ ಗುಂಡಿಗಳನ್ನು ಮುಚ್ಚಿದರೆ ಅನುಕೂಲವಾಗುತ್ತದೆ ಎಂದು ಜೈಭುವನೇಶ್ವರಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಧುಸೂದನ್ ಹೇಳಿದರು.
ಮಳೆ ಬಂದಾಗ ಹೊಳೆಯಂತಾಗುವ ರಸ್ತೆಗಳು ಮಂಡಗದ್ದೆ ಸರ್ಕಲ್‌ನಿಂದ ಪ್ರವಾಸಿ ಮಂದಿರದವರೆಗೆ ಹದಗೆಟ್ಟ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.