ADVERTISEMENT

ಬಾಳೆಹೊನ್ನೂರು | ಮತ್ತೆ ಇಬ್ಬರಿಗೆ ಕೆಎಫ್‌ಡಿ ಸೋಂಕು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 14:43 IST
Last Updated 8 ಫೆಬ್ರುವರಿ 2025, 14:43 IST
<div class="paragraphs"><p>ಪ್ರಾತಿನಿಧಿಕ&nbsp; ಚಿತ್ರ&nbsp;</p></div>

ಪ್ರಾತಿನಿಧಿಕ  ಚಿತ್ರ 

   

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಇಬ್ಬರು ಕಾರ್ಮಿಕರಿಗೆ ಕೆಎಫ್‌ಡಿ (ಮಂಗನ ಕಾಯಿಲೆ) ಸೋಂಕು ತಗುಲಿದೆ.

ಕೂಲಿ ಅರಸಿ ಚಿಕ್ಕಮಗಳೂರಿನ ಕಾಫಿ ತೋಟಕ್ಕೆ ಬಂದಿದ್ದ ಹರಪನಹಳ್ಳಿ ಮೂಲದ 21 ಮತ್ತು 23 ವರ್ಷದ ಇಬ್ಬರು ಕಾರ್ಮಿಕರು 10 ದಿನಗಳ ಹಿಂದೆ ಕರ್ಕೇಶ್ವರದ ತೋಟಕ್ಕೆ ಸೇರಿದ್ದರು.

ADVERTISEMENT

ಶುಕ್ರವಾರ ದಿಢೀರ್ ಜ್ವರ, ಸುಸ್ತು, ಮೈ ಕೈ ನೋವು ಕಾಣಿಸಿಕೊಂಡ ಕಾರಣ ಬಾಳೆಹೊನ್ನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಕೊಪ್ಪಕ್ಕೆ ತೆರಳಿ ಪರೀಕ್ಷೆಗೆ ಒಳಪಟ್ಟಾಗ ಕೆಎಫ್‌ಡಿ ಸೋಂಕು ತಗಲಿರುವುದು ಪತ್ತೆಯಾಗಿದ್ದು, ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.