ಕೊಟ್ಟಿಗೆಹಾರ: ‘ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ₹46.09 ಲಕ್ಷ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಬಿ.ಎಸ್.ಕಲ್ಲೇಶ್ ಹೇಳಿದರು.
ಭಾನುವಾರ ಚರ್ಚ್ ಹಾಲ್‌ನಲ್ಲಿ ನಡೆದ 48ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು. ಸಂಘದಿಂದ ಕೊಟ್ಟಿಗೆಹಾರದಲ್ಲಿ ₹44.05ಲಕ್ಷ ವ್ಯಯಿಸಿ ಹೊಸ ಗೋದಾಮು ನಿರ್ಮಿಸಿ, ಅದರ ಉದ್ಘಾಟನೆ ನೆರವೇರಿಸಿದ್ದೇವೆ. ಬಾಳೂರು, ಹೆಗ್ಗುಡ್ಲುವಿನಲ್ಲಿ ಆಹಾರ ಗೋದಾಮು ಕಟ್ಟಲು ಸಂಘವು ನಿರ್ಧರಿಸಿದೆ’ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳಸೇ ಬಿ. ಶಿವಣ್ಣ ಮಾತನಾಡಿ '14 ಸಹಕಾರ ಸಂಘಗಳು ನಮ್ಮ ಬ್ಯಾಂಕ್ ವ್ಯಾಪ್ತಿಗೆ ಬರುತ್ತವೆ’ ಎಂದರು.
ಟಿ.ಎಂ.ಗಜೇಂದ್ರ ಮಾತನಾಡಿ 'ದಶಕಗಳ ಹಿಂದೆ ಸರ್ವ ಸದಸ್ಯರು ಶ್ರಮಿಸಿದ ಫಲದಿಂದ ಸಹಕಾರ ಸಂಘ ಮೇಲ್ಮಟ್ಟಕ್ಕೆ ಬಂದಿದೆ. ಶೇ10ರಷ್ಟು ಲಾಭಾಂಶ ಮುಂದುವರಿಸಲಾಗಿದೆ 'ಎಂದರು. ಸದಸ್ಯ ಬಿ.ಶಿವರಾಮ ಶೆಟ್ಟಿ ಮಾತನಾಡಿದರು. ಕಾರ್ಯನಿರ್ವಾಹಣಾಧಿಕಾರಿ ಜಿ.ಪಿ.ನಿಶಾಂತ್ ವಾರ್ಷಿಕ ವರದಿ ವಾಚಿಸಿದರು. ಮೃತರಾದ ನಿರ್ದೇಶಕ ಶಾಮಣ್ಣ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಸಹಕಾರ ಸಂಘದ ಉಪಾಧ್ಯಕ್ಷ ಜಿ.ಕೆ.ದಿವಾಕರ್, ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕ ಯು.ಸಿ.ಪ್ರಯಾಗ್, ಸಂಘದ ಉಪಾಧ್ಯಕ್ಷೆ ಎಚ್.ಕೆ.ಮಮತಾ, ನಿರ್ದೇಶಕರಾದ ಬಿ.ಎಂ.ಭರತ್, ಎ.ಆರ್.ಅಭಿಲಾಷ್, ರಂಗನಾಥ್, ಬಿ.ಎಸ್.ವಿಕ್ರಂ, ಬಿ.ಎಂ.ಸತೀಶ್, ಜಿ.ಬಿ.ಲಕ್ಷ್ಮಿ, ದಿಲ್ ದಾರ್ ಬೇಗಂ, ಬಿ.ಆರ್.ಚಂದ್ರಶೇಖರ್, ಬಿ.ಎಲ್.ಅಶ್ವಥ್, ಕೆ.ಕೆ.ಯತೀಶ್, ನಾರಾಯಣ್ ಗೌಡ, ಎ.ಬಿ.ನಾಗೇಶ್ ಗೌಡ, ಕೆ.ಪಿ.ರಮೇಶ, ಬಿ.ಎ.ಪ್ರದೀಪ್, ಸಿಇಒ ಜಿ.ಪಿ.ನಿಶಾಂತ್, ಸಿಬ್ಬಂದಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.