ADVERTISEMENT

ಆಲ್ದೂರು | ವಿದ್ಯುತ್ ಅವಘಡ: ಕೃಷಿಕ ಸಾವು

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 12:13 IST
Last Updated 25 ಜನವರಿ 2025, 12:13 IST
ಹೂವೇಗೌಡ
ಹೂವೇಗೌಡ   

ಆಲ್ದೂರು: ಇಲ್ಲಿಗೆ ಸಮೀಪದ ವಸ್ತಾರೆ ಹೋಬಳಿ ಕೂದುವಳ್ಳಿ ಗ್ರಾಮದ ಕೃಷಿಕ ಹೂವೇಗೌಡ (54) ಅವರು ಶನಿವಾರ ತಮ್ಮ ತೋಟದಲ್ಲಿ ಮರಗಸಿ ಸಂದರ್ಭ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ.

ಹೂವೇಗೌಡರ ಪತ್ನಿ ವಿನೋದಾ ದೂರು ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ದಿನಗಳ ಹಿಂದೆ ಹೂವೇಗೌಡರ ಮಗ ಶಿವೇಗೌಡ ಟ್ರ್ಯಾಕ್ಟರ್ ಅಪಘಾತ ಉಂಟಾಗಿ ಗಂಭೀರ ಗಾಯಗೊಂಡಿದ್ದು, ಈಗ ತಾನೆ ಚೇತರಿಸಿಕೊಳ್ಳುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.