ಚಿಕ್ಕಮಗಳೂರು: ಬೇಲೂರು ಪುರಸಭೆ ಗಣಪತಿ ವಿಗ್ರಹದ ಮೇಲೆ ಚಪ್ಪಲಿ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸುವುದು ಮಾತ್ರವಲ್ಲ, ಅವರ ಮನೆಗೆ ಬುಲ್ಡೋಜರ್ ಹತ್ತಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ತಪ್ಪಿತ್ತಸ್ಥರ ರಕ್ಷಣೆಗೆ ಮುಂದಾದರೆ ಸಮಾಜವೇ ಬುಲ್ಡೋಜರ್ ತೆಗೆದುಕೊಂಡು ಅವರ ಮನೆ ಮುಂದೆ ಹೋಗಲಿದೆ’ ಎಂದು ಎಚ್ಚರಿಸಿದರು.
‘ಕೋಮು ಗಲಭೆ ಸೃಷ್ಟಿಸುವ ಭಾಗವಾಗಿ ಈ ಕೆಲಸ ಮಾಡಿದ್ದಾರೆ. ಸಂಚಿನ ಭಾಗವಾಗಿಯೇ ಚಪ್ಪಲಿ ಹಾರ ಹಾಕಲಾಗಿದೆ. ಸಜ್ಜನರಿಗೆ ಸಿಟ್ಟು ತರಿಸಿದರೆ ಯಾರು ಉಳಿಯುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.