ADVERTISEMENT

ಮೂಡಿಗೆರೆ: ಮೈ ನವಿರೇಳಿಸಿದ ಡರ್ಟ್ ಟ್ರ್ಯಾಕ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 13:57 IST
Last Updated 8 ಅಕ್ಟೋಬರ್ 2022, 13:57 IST
ಮೂಡಿಗೆರೆಯ ರಾಜೀವ್ ಲೇ ಔಟ್ ನಲ್ಲಿ ಶನಿವಾರ ಟೀಮ್ ಮೆಜೆಸ್ಟಿಕ್ ತಂಡದ ವತಿಯಿಂದ ನಡೆದ ಡರ್ಟ್ ಟ್ರ್ಯಾಕ್ ನಲ್ಲಿ ಸ್ಪರ್ಧಿಯೊಬ್ಬರು ಧೂಳೆಬ್ಬಿಸಿ ಮುಂದದೆ ಸಾಗಿದರು.
ಮೂಡಿಗೆರೆಯ ರಾಜೀವ್ ಲೇ ಔಟ್ ನಲ್ಲಿ ಶನಿವಾರ ಟೀಮ್ ಮೆಜೆಸ್ಟಿಕ್ ತಂಡದ ವತಿಯಿಂದ ನಡೆದ ಡರ್ಟ್ ಟ್ರ್ಯಾಕ್ ನಲ್ಲಿ ಸ್ಪರ್ಧಿಯೊಬ್ಬರು ಧೂಳೆಬ್ಬಿಸಿ ಮುಂದದೆ ಸಾಗಿದರು.   

ಮೂಡಿಗೆರೆ: ಟೀಮ್ ಮೆಜೆಸ್ಟಿಕ್ ಮೂಡಿಗೆರೆ ತಂಡದ ವತಿಯಿಂದ ಶನಿವಾರ ಪಟ್ಟಣದ ರಾಜೀವ್ ಲೇಔಟ್ ನಲ್ಲಿ ಏರ್ಪಡಿಸಿದ್ದ ಡರ್ಟ್ ಟ್ರ್ಯಾಕ್ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸ್ಪರ್ಧಿಗಳು ದೂಳೆಬ್ಬಿಸಿ ಮೈ ನವಿರೇಳಿಸಿದರು.

ರಾಜೀವ್ ಲೇ ಔಟ್‌ನಲ್ಲಿ ಸಿದ್ಧಪಡಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ವಿವಿಧ ರಾಜಕೀಯ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಏಕಕಾಲದಲ್ಲಿ ಸ್ಪರ್ಧೆಗೆ ಚಾಲನೆ ನೀಡಿರು. ವಿಶಿಷ್ಟವಾಗಿ ಸಿದ್ಧಪಡಿಸಲಾಗಿದ್ದ ಅಂಕುಡೊಂಕಿನ ದಾರಿಯಲ್ಲಿ ಬೈಕ್ ಹಾಗೂ ಕಾರುಗಳ ಪ್ರತ್ಯೇಕ ಸ್ಪರ್ಧೆಗಳು ನಡೆದವು. ಪ್ರಾರಂಭದಲ್ಲಿ ಬೈಕ್ ಗಳ ಡರ್ಟ್ ಟ್ರ್ಯಾಕ್ ನಡೆಸಲಾಯಿತು. ಮೂಡಿಗೆರೆ ಲೋಕಲ್ ಕ್ಲಾಸ್, ಚಿಕ್ಕಮಗಳೂರು ಲೋಕಲ್ ಕ್ಲಾಸ್, 4 ಸ್ಟ್ರೋಕ್ ಕ್ಲಾಸ್, ಎಕ್ಸ್‌ಪೋರ್ಟ್ ಕ್ಲಾಸ್, 2 ಹಾಗೂ 4 ಸ್ಟ್ರೋಕ್, ಇಂಡಿಯನ್ ಓಪನ್ ಕ್ಲಾಸ್ ಬೈಕ್ ಡರ್ಟ್ ಟ್ರ್ಯಾಕ್ ನಡೆದವು.

ಬಳಿಕ 800 ಸಿಸಿ ಸೇರಿದಂತೆ 1100 ಸಿಸಿ, 1400 ಸಿಸಿ, 1600 ಸಿಸಿ ಸಂಬಂಧಿತ ನಾಲ್ಕು ಚಕ್ರ ವಾಹಗಳ ಡರ್ಟ್ ಟ್ರ್ಯಾಕ್ ನಡೆಸಲಾಯಿತು. ಸಂಜೆ ವೇಳೆಗೆ ತುಂತುರು ಮಳೆ ಸುರಿಯಿತು. ಮಳೆಯ ನಡುವೆಯೇ ಸ್ಪರ್ಧಾಳುಗಳು ಮುನ್ನುಗ್ಗಿ ಯಶಸ್ಸಿನತ್ತ ಸಾಗಿದರು. ಟೀಮ್ ಮೆಜೆಸ್ಟಿಕ್ ನ ಪದಾಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.