ಚಿಕ್ಕಮಗಳೂರು: ತಾಲ್ಲೂಕಿನ ಆಲ್ದೂರು ಸಮೀಪ ಮಡೆನೆರಳು ಬಳಿ ಕಾಡಾನೆಯೊಂದು ತಿವಿದು ಅರಣ್ಯ ರಕ್ಷಕ ಪುಟ್ಟರಾಜು (38) ಸಾವಿಗೀಡಾಗಿದ್ದಾರೆ.
ಬೆಳಿಗ್ಗೆ 11.30ರ ಸುಮಾರಿಗೆ ಅವಘಡ ಸಂಭವಿಸಿದೆ. ಆನೆ ತಿವಿದು ತೀವ್ರ ಗಾಯಗೊಂಡಿದ್ದ ಪುಟ್ಟರಾಜು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
'ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯ ಸಿಬ್ಬಂದಿ ತಂಡ ತೆರಳಿತ್ತು. ಪುಟ್ಟರಾಜು ಆ ತಂಡದಲ್ಲಿದ್ದರು. ಆನೆ ಅವರ ಮೇಲೆ ದಾಳಿ ಮಾಡಿದೆ' ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.