ADVERTISEMENT

ಮೂಡಿಗೆರೆ: ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕಿ ರಮಣಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 12:39 IST
Last Updated 2 ಜೂನ್ 2025, 12:39 IST
ನಿವೃತ್ತಿ ಹೊಂದಿದ ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕಿ ಎಸ್. ರಮಣಿಗೆ ಇಲಾಖೆ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು
ನಿವೃತ್ತಿ ಹೊಂದಿದ ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕಿ ಎಸ್. ರಮಣಿಗೆ ಇಲಾಖೆ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು   

ಮೂಡಿಗೆರೆ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಧೀಕ್ಷಕಿಯಾಗಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಎಂ. ರಮಣಿ ಅವರು ವಯೋ ನಿವೃತ್ತಿ ಹೊಂದಿದ್ದು, ಸೋಮವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ ಮಾತನಾಡಿ, ನಿವೃತ್ತಿ ಬಳಿಕ ಇನ್ನಷ್ಟು ಲವಲವಿಕೆಯಿಂದ ಬದುಕನ್ನು ರೂಪಿಸಿಕೊಂಡರೆ ಅನಾರೋಗ್ಯವನ್ನು ದೂರವಿಟ್ಟು ನೆಮ್ಮದಿಯ ಬದುಕು ನಡೆಸಬಹುದು ಎಂದರು.

ಸಿಬ್ಬಂದಿ ಎಚ್.ಒ. ಕಾವ್ಯ, ಎಚ್. ಮಂಜಪ್ಪ, ಗಂಗಾಧರಪ್ಪ, ಲಿಪಿಕ, ವಾಹನ ಚಾಲಕರ ಹಾಗೂ ಗ್ರೂಪ್ ‘ಡಿ’ ನೌಕರರ ಸಂಘದ ಅಧ್ಯಕ್ಷ ಸೈಯ್ಯದ್ ರಫೀ ಅಂಜುಂ, ಕಾರ್ಯದರ್ಶಿ ಶ್ರೀಕಾಂತ್, ಉಪಾಧ್ಯಕ್ಷ ಧ್ರುವರಾಜ್, ಶಿಕ್ಷಣ ಇಲಾಖೆ ಅಧೀಕ್ಷಕ ಎಂ.ಎನ್.‌ ಶಶಿಧರ್, ಟಿಪಿಇಒ ಕೆ.ಬಿ. ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹೇಮಂತ್‍ಚಂದ್ರ, ಇಸಿಒ ಸ್ಮಿತಾ ಲೋಬೊ, ಬಿಆರ್‌ಸಿ ಸವಿತಾ, ಕ್ಷೇತ್ರ ಸಮನ್ವಯಾಧಿಕಾರಿ ರವಿ ನಾಯಕ್, ಡಿ.ಸಿ. ಲತಾ, ಲಾರೆನ್ಸ್ ಡಿಸೋಜ, ಸಿ.ಎನ್. ಆರತಿ, ಡಿ. ನವೀನ, ಎಂ. ಹಿತೇಶ್, ಹೇಮಂತ್‍ ಕುಮಾರ್, ಶಾರದಾ, ಡಿ. ಚಂದ್ರಾವತಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.